ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್.ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಹುಮನಾಬಾದ ಪೊಲೀಸ್ ಠಾಣಾ ವ್ಯಾಪ್ತಿಯ ಘೋಡವಾಡಿ ಗ್ರಾಮದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯ ಮೇಲೆ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ನಿಂತಿರುವ ಮಾಹಿತಿಯಂತೆ, ಹುಮನಾಬಾದ ಸಂಚಾರಿ ಪೊಲೀಸ್ ಠಾಣೆ ಪ್ರಭಾರಿ ಪಿ.ಎಸ್.ಐ ಹುಮನಾಬಾದ ಪೊಲೀಸ್ ಠಾಣೆ ಶ್ರೀ ಹುಲೆಪ್ಪಾ, ರವರು ನಶಾ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಠಾಣೆಯ ಸಿಬ್ಬಂದಿ ರವರೊಂದಿಗೆ ಪತ್ರಾಂಕಿತ ಅಧಿಕಾರಿ ಡಾಃ ರೋಹಿತ ರಘೋಜಿ, ವೈದ್ಯಾಧಿಕಾರಿಗಳು ಹುಮನಾಬಾದ ರವರ ಸಮಕ್ಷಮ ಆರೋಪಿತರ ಮೇಲೆ ದಾಳಿ ಮಾಡಿ ಅವನಿಂದ ನಗದು ಹಣ 550=00 ರೂಪಾಯಿ ಮತ್ತು 3 ಕೆ.ಜಿ 920 ಗ್ರಾಂ ಗಾಂಜಾ ಅ:ಕಿ: 3,90,000=00 ರೂಪಾಯಿ, ಒಂದು ಮೊಬೈಲ್ ಅಃಕಿ 750=00 ರೂಪಾಯಿಹೀಗೆ ಒಟ್ಟು ಅ:ಕಿ: 3,91,300=00 ರೂಪಾಯಿ ಮೌಲ್ಯದವುಗಳನ್ನು ವಶ ಪಡಿಸಿಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕಾನೂನು ರೀತ್ಯ ಕ್ರಮ ಕೈಕೊಳ್ಳಲಾಗಿದೆ.
ತಮ್ಮ ಠಾಣಾ ವ್ಯಾಪ್ತಿಯನ್ನು ನಶಾ ಮುಕ್ತ ಮಾಡುವ ಸಂಕಲ್ಪ ಇಟ್ಟುಕೊಂಡು ಗಾಂಜಾ ದಾಳಿಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಬೀದರ ಜಿಲ್ಲೆಯನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ ಎಂದು ಪ್ರದೀಪ್ ಗುಂಟಿ, ಐ.ಪಿ.ಎಸ್.,ಪೊಲೀಸ್ ವರೀಷ್ಠಾಧಿಕಾರಿಗಳು ತಿಳಿಸಿದಾರೆ
ವರದಿ :- ಸಿದ್ದು ಪಟ್ಟೇದಾರ್









