ನಮ್ಮ ಬಳಿ ಇರುವ ಸರಕೊಂದು ಕಾಣೆಯಾದರೆ ವಿಧಿಯ ಬಗ್ಗೆ ತೆಗಳುತ್ತೇವೆ. ಛೇ,, ಹಣೆಬರಹವಿಷ್ಟೇ.. ಎಂದು ಭಗವಂತನನ್ನು ಶಪಿಸುತ್ತೇವೆ. ಈ ಹಣೆಬರಹ ಸ್ವಲ್ಪ ಏರಿಳಿತ ಕಂಡರೆ ಆಗಸಕ್ಕೆ ಹರಲೂಬಹುದು, ಅವನತಿಯತ್ತ ಸಾಗಲೂಬಹುದು. ಇಲ್ಲೊಬ್ಬ ಕಳ್ಳನ ಹಣೆಬರಹವು ಇದೇ ರೀತಿ ಆಗಿದೆ. ಕದ್ದಮಾಲನ್ನು ಇನ್ನೊಂದು ಕದ್ದ ಮಾಲಿನ ಸಮೇತ ನೋಡಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ಅಂದಹಾಗೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಒಂದು ಕಾಣೆಯಾಗಿರುವುದರ ಕುರಿತು ದೂರು ದಾಖಲಾಗಿತ್ತು. ಇದರ ಸಲುವಾಗಿ ಕಾರ್ಯಾಚರಣೆಗೆ ಇಳಿದ ಪೊಲೀಸರಿಗೆ ಖಚಿತ ಮಾಹಿತಿಯು ದೊರೆತಿತ್ತ. ಜೆ.ಪಿ ನಗರ 8ನೇ ಹಂತದ ಬಿಎಂಟಿಸಿ ಬಸ್ ಡಿಪೋ ಬಳಿ ವ್ಯಕ್ತಿಯೋರ್ವನನ್ನು ಹಿಡಿಯಲಾಯಿತು. ಆದರೆ ಆತ ಅಲ್ಲಿಗೆ ಬಂದ ಉದ್ದೇಶವೆ ಆಶ್ಚರ್ಯಕ್ಕೆ ಈಡು ಮಾಡಿತು. ಇದೇ ವ್ಯಕ್ತಿ ಬ್ಯಾಟರಾಯನಪುರ ಠಾಣೆಗೆ ಸೇರಿದ ಜಾಗದಿಂದ ಒಂದು ದ್ವಿಚಕ್ರವನ್ನು ಎಗರಿಸಿ ಇಲ್ಲಿಯೇ ಅವತಿಸಿದ್ದನಂತೆ. ಅದನ್ನು ನೋಡಲು ಬಂದು ವಾಹನಗಳ ಸಮೇತ ವಶಕ್ಕೆ ಸಿಕ್ಕಿದ್ದಾನೆ. ಈತನಿಂದ ಸುಮಾರು 60 ಸಾವಿರ ಮೌಲ್ಯವುಳ್ಳ ಎರಡು ದ್ವಿಚಕ್ರವನ್ನು ಕಬ್ಜೆಗೆ ಪಡೆಯಲಾಗಿದೆ.
ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಲೋಕೇಶ್ ಬರಮಪ್ಪ ಜಗಲಸರ್, ಐಪಿಎಸ್ ಮತ್ತು ಸುಬ್ರಹ್ಮಣ್ಯಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್ ಎಸ್.ಬಿ ಅವರ ಮಾರ್ಗದರ್ಶನದಲ್ಲಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎಚ್.ಕೆ ರವಿಕುಮಾರ್ ಮತ್ತು ಅವರ ತಂಡ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









