ಸಿ.ಇ.ಐ.ಆರ್ ತಂತ್ರಾಂಶದ ಮೂಲಕ ವಿವಿಧ ಪ್ರಕರಣಗಳಲ್ಲಿ ಕಳುವಾದ ವಿವಿಧ 641 ಮಾದರಿಯ ಮೊಬೈಲ್ ಫೋನ್ಗಳ ವಶ. ಮೌಲ್ಯ 1.6 ಕೋಟಿ.
2026ನೇ ಸಾಲಿನ ಜನವರಿ ತಿಂಗಳಿನಿಂದ ಇಲ್ಲಿಯವರೆಗೆ ಪೂರ್ವ ವಿಭಾಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಸಿ.ಇ.ಐ.ಆರ್ ತಂತ್ರಾಂಶದ ಮೂಲಕ ಪತ್ತೆಯಾಗಿದ್ದ 641 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿಸಿಕೊಂಡಿದ್ದು, ವಶಪಡಿಸಿಕೊಂಡ ಮೊಬೈಲ್ ಫೋನ್ಗಳನ್ನು ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರು ದಿನಾಂಕ:28/02/2026 ರಂದು ಬೆಂಗಳೂರು ನಗರದ ಇಂದಿರಾನಗರದಲ್ಲಿ ನಡೆದ ಮಾಸಿಕ ಜನ ಸಂಪರ್ಕ ಸಭೆಯಲ್ಲಿ ಸಂಬಂಧಪಟ್ಟ ವಾರಸುದಾರರಿಗೆ ಹಿಂತಿರುಗಿಸಿರುತ್ತಾರೆ.
ಒಟ್ಟು 641 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ, ಮೊಬೈಲ್ ಫೋನ್ಗಳ ಮೌಲ್ಯ 160,00,000 ರೂ
ಪೂರ್ವ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿವರ ಈ ವಿಶೇಷ ಕಾರ್ಯಾಚರಣೆಯನ್ನು ಶ್ರೀ.ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್, ಮಾನ್ಯ ಪೊಲೀಸ್ ಆಯುಕ್ತರು ಬೆಂಗಳೂರು ನಗರ ಹಾಗೂ ಶ್ರೀ.ರಮೇಶ್.ಬಿ. ಐ.ಪಿ.ಎಸ್, ಮಾನ್ಯ ಜಂಟಿ ಪೊಲೀಸ್ ಆಯುಕ್ತರು, ಪೂರ್ವ, ಬೆಂಗಳೂರು ನಗರರವರು ಶ್ಲಾಘಿಸಿರುತ್ತಾರೆ.









