ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ” ಜಿಲ್ಲೆಯನ್ನು ಶಾಂತಯುತವಾಗಿ ಇಡಲು ಕಾನೂನು ಸೂ ವ್ಯವಸ್ಥೆ ಕಾಪಾಡುವುದು ಅತೀ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕಳೆದ ಒಂದು ವಾರದಲ್ಲಿ ಬೀದರ ಜಿಲ್ಲೆಯ ಮಂಠಾಳ ಪೊಲೀಸ್ ಠಾಣಾ ವ್ಯಾಪ್ತಿಯ ಕೊಹಿನೂರ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರ ಪ್ರತಿಮೆ ಅನಾವರಣ, ಬಸವಕಲ್ಯಾಣ ನಗರದಲ್ಲಿ ತಿರಂಗಾ ಯಾತ್ರೆ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಭಾತಂಬ್ರಾ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಮಹದೇವ್ ಮಂದಿರದ ಕಳಸಾ ರೋಹಣ ಕಾರ್ಯಕ್ರಮ ಬ/ಬ, ಬಸವಕಲ್ಯಾಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಹಶಿಲ್ ಕಛೇರಿಯಲ್ಲಿ ಬ/ಬ. ಗಾಂಧಿಗಂಜ ಪೊಲೀಸ್ ಠಾಣೆಯ ಬೀದರ ರೈಲ್ವೆ ಡಿ ಗ್ರೂಪ ನೌಕರರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಪ್ರತಿ ಭಟನೆ. ಮೇಹಕರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಹಕರ್ ಗ್ರಾಮದಲ್ಲಿ ಶ್ರೀ ರಾಜೇಶ್ವರ ಶಿವಾಚಾರ್ಯರ ಗುರು ಪಟ್ಟಾಭಿಷಕದ 25ನೇ ವರ್ಷದ ರಜತ ಮಹೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕಿ ಮೇರವಣಿಗೆ, ಬೀದರ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಜಾಮಿಯಾ ಮಸೀದಿ ಹತ್ತಿರ ಬೀದರ ಜಿಲ್ಲೆಯಿಂದ ಹಜ್ ಯಾತ್ರೆಗೆ ಬಿಳ್ಕೊಡಿಗೆ ಸಮಾರಂಭ, ಹಾಗೂ ಜಿಲ್ಲೆಯಲ್ಲಿ ಗಣ್ಯರ ಮತ್ತು ಅತೀ ಗಣ್ಯರ ಕಾರ್ಯಕ್ರಮಗಳು, ಪ್ರವಾಸಗಳ ಸಮಯದಲ್ಲಿ ಅವರ ಸುರಕ್ಷತೆಯನ್ನು ಒದಗಿಸುದ್ದು ಮತ್ತು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಕಾನೂನು ಸುವ್ಯವಸ್ಥೆಗೆ ಯಶಸ್ವಿಯಾಗಿ ಜಿಲ್ಲೆಯ ಪೊಲೀಸರು ನಿರ್ವಹಿಸಿರುತ್ತಾರೆ.

ಜಿಲ್ಲೆಯ ಮೂರು ಉಪ-ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯವರು ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕಾನೂನು ಸೂ ವ್ಯವಸ್ಥೆ ಕಾಡುವಲ್ಲಿ ಅಚ್ಚು ಕಟ್ಟಾಗಿ ಬ/ಬ ಕರ್ತವ್ಯ ನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.









