ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದಂತಹ ಕಳ್ಳರ ಕರಿನೆರಳು ಈಗ ಬಹು ಗಾತ್ರದ ವಾಹನ ಟ್ರ್ಯಾಕ್ಟರ್ ಗಳಮೇಲೆ ಬಿದ್ದಿದೆ. ಟ್ರ್ಯಾಕ್ಟರ್ ಗಳನ್ನು ಮಾತ್ರವಲ್ಲದೆ ಟ್ರಾಲಿಯನ್ನು ಹೊಂದಿರುವಂತಹ ಭಾರಿ ಬಂಡಿಗಳೇ ಗುರಿಯಾಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕಳುವು ಮಾಡಿ ತುಮಕೂರಿನಲ್ಲಿ ಮಾರಾಟ ಮಾಡಿರುವ ಘಟನೆಯ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಟ್ರಾಲಿ ಸಹಿತ ಟ್ರ್ಯಾಕ್ಟರ್ ಗಳನ್ನು ಕಳುವು ಮಾಡುತ್ತಿದ್ದ ಗುಂಪೊಂದು ಪೊಲೀಸರ ಗಾಳಕ್ಕೆ ಬಿದ್ದಿರುವ ಘಟನೆ ನಡೆದಿದೆ. ಬೆಂಗಳೂರಿನ ಕೋಣನಕುಂಟೆ, ಪುಟ್ಟೇನಹಳ್ಳಿ, ತಲಘಟ್ಟಪುರ ಮತ್ತು ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಒಟ್ಟು ನಾಲ್ಕು ಟ್ರ್ಯಾಕ್ಟರ್ ಮತ್ತು ಟ್ರಾಲಿಯನ್ನು ಬೆಂಗಳೂರಿನ ಮೂವರು ಕಳ್ಳರ ಗುಂಪು ರಾತ್ರೋರಾತ್ರಿ ಎದುರಿಸಿದ್ದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಇನ್ನು ಕದ್ದ ವಾಹನಗಳನ್ನು ತುಮಕೂರಿನ ಓರ್ವ ವ್ಯಕ್ತಿಗೆ ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ. ಈ ಪ್ರಕರಣದ ಆರೋಪಿಗಳಿಂದ ಸರಿ ಸುಮಾರು 20 ಲಕ್ಷ ಬೆಲೆಬಾಳುವ ಒಟ್ಟು ನಾಲ್ಕು ಟ್ರಾಲಿ ಸಮೇತ ಟ್ರ್ಯಾಕ್ಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರವರ ಮಾರ್ಗದರ್ಶನದಲ್ಲಿ ಸುಭ್ರಮಣ್ಯಪುರ ಉಪ – ವಿಭಾಗದ ಸಹಾಯಕ ಪೊಲೀಸ್ ಆಯುಕ್ತರವರ ನೇತೃತ್ವದಲ್ಲಿ ಕೋಣನಕುಂಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪಾಪಣ್ಣ ಮತ್ತು ಅಧಿಕಾರಿ/ಸಿಬ್ಬಂದಿಯವರ ತಂಡ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗುತ್ತಾರೆ.
ವರದಿ ಮೋಹನ್








