ಚಿಕ್ಕಜಾಲ ಪೊಲೀಸ್ ಠಾಣಾ ಸರಹದ್ದಿನ ಕುದಿರೆಗೆರೆಗ್ರಾಮ ಜಾಲ ಹೋಬಳಿಯಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:19/09/2024 ರಂದು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:14/09/2024 ರಂದು ನಾರಾಯಣಪುರ ಸರ್ಕಲ್‌ನಲ್ಲಿರುವ ತಮ್ಮ ಸ್ಟೀಲ್ ಹಾರ್ಡ್ ವೇರ್ ಅಂಗಡಿಯ ಮುಂದೆ ನಿಲ್ಲಿಸಿದ್ದ ದ್ವಿ-ಚಕ್ರ ವಾಹನವನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದ್ವಿ-ಚಕ್ರ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:08/11/2024 ರಂದು ಚಪ್ಪರ್‌ಲ್ ರಸ್ತೆ, ಕುದಿರೆಗೆರೆ ಕ್ರಾಸ್ ಬಳಿ ಪ್ರಕರಣದಲ್ಲಿ ಕಳುವಾಗಿದ್ದ ದ್ವಿ-ಚಕ್ರ ವಾಹನ ಸಮೇತ ಓರ್ವ ವ್ಯಕ್ತಿಯನ್ನು ಮತ್ತು ಅದೇ ದಿನ ಬನಶಂಕರಿ 1ನೇ ಹಂತದ ಬಳಿ ದ್ವಿ-ಚಕ್ರ ವಾಹನ ಸಮೇತ ಮತ್ತೋರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಇಬ್ಬರು ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ ಹಾಗೂ ಬೆಂಗಳೂರಿನ ವಿವಿಧ ಕಡೆಗಳಲ್ಲಿ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ.

ದಿನಾಂಕ:08/11/2024 ರಂದು ಅರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 4 ದಿನಗಳ ಕಾಲ ಪೊಲೀಸ್’ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಆರೋಪಿಗಳು ನೀಡಿದ ಮಾಹಿತಿ ಮೇರೆಗೆ, ಆಂಧ್ರದ ವಿ ಖೋಟಾದಲ್ಲಿ ವಾಸವಿರುವ ಆರೋಪಿಯೋರ್ವನ ಸ್ನೇಹಿತನಿಗೆ ನೀಡಿದ್ದ 3 ದ್ವಿ-ಚಕ್ರ ವಾಹನಗಳನ್ನು ದಿನಾಂಕ:09/11/2024 ರಂದು ವಶಪಡಿಸಿಕೊಳ್ಳಲಾಯಿತು.
ಅದೇ ದಿನ ಚಂದ್ರಾಯಪಟ್ಟಣದಲ್ಲಿ ವಾಸವಿರುವ ಮತ್ತೋರ್ವ ಸ್ನೇಹಿತನಿಗೆ ನೀಡಿದ್ದ 1 ದ್ವಿ-ಚಕ್ರ ವಾಹನವನ್ನು ವಶ ಪಡಿಸಿಕೊಳ್ಳಲಾಯಿತು.
ದಿನಾಂಕ:10/1/.2024 ರಂದು ದೇವನಹಳ್ಳಿಯ ಸಮೀಪದ ವಿಜಿಪುರದಲ್ಲಿ ರಿಪೇರಿಗೆಂದು ಮೆಕಾನಿಕ್‌ಗೆ ನೀಡಿದ್ದ 4 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು.
ಅದೇ ದಿನ ವಿಜಿಪುರದಲ್ಲಿ ವಾಸವಿರುವ ಆರೋಪಿಗಳಿಬ್ಬರ ಸ್ನೇಹಿತನಿಗೆ ನೀಡಿದ್ದ 1 ದ್ವಿ-ಚಕ್ರ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದ ಆರೋಪಿಗಳ ವಶದಿಂದ ಒಟ್ಟಾರೆಯಾಗಿ || ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 14,45,000/-(ಹದಿನಾಲ್ಕು ಲಕ್ಷದ ನಲವತ್ತೈದು ಸಾವಿರ ರೂಪಾಯಿ).
ಈ ಪ್ರಕರಣದ ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಓರ್ವ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಮತ್ತೋರ್ವ ಆರೋಪಿಯು ವಿದ್ಯಾರ್ಥಿಯಾಗಿರುವುದರಿಂದ ಆತನಿಗೆ ಬೇಲ್ ಮೇಲೆ ಬಿಡುಗಡೆ ಮಾಡಿರುತ್ತದೆ.
ಈ ಪ್ರಕರಣದ ಆರೋಪಿಗಳ ಬಂಧನದಿಂದ 1) ಚಿಕ್ಕಜಾಲ ಪೊಲೀಸ್ ಠಾಣೆಯ-2 ವಾಹನ ಕಳವು ಪ್ರಕರಣಗಳು ಹಾಗೂ 2-ರಾಬರಿ ಪ್ರಕರಣಗಳು 2) ಯಶವಂತಪುರ ಪೊಲೀಸ್ ಠಾಣೆಯ- ವಾಹನ ಕಳವು ಪ್ರಕರಣ, 3) ಯಲಹಂಕ ಪೊಲೀಸ್ ಠಾಣೆಯ- ವಾಹನ ಕಳವು ಪ್ರಕರಣ, 4) ಹೊಸಕೋಟೆ ಪೊಲೀಸ್ ಠಾಣೆಯ- 1 ವಾಹನ ಕಳವು ಪ್ರಕರಣ, 5) ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯ- ವಾಹನ ಕಳವು ಪ್ರಕರಣ, 6) ಆಂಧ್ರಪ್ರದೇಶದ ವಿ.ಕೋಟಾ ಪೊಲೀಸ್ ಠಾಣೆಯ- ವಾಹನ ಕಳವು ಪ್ರಕರಣ, 7) ಸೂರ್ಯನಗರ ಪೊಲೀಸ್ ಠಾಣೆಯ- ವಾಹನ ಕಳವು ಪ್ರಕರಣ, 8) ಅತ್ತಿಬೆಲೆ ಪೊಲೀಸ್ ಠಾಣೆಯ- ವಾಹನ ಕಳವು ಪ್ರಕರಣ, 9) ತಮಿಳುನಾಡಿನ ಹೊಸೂರು ಪೊಲೀಸ್ ಠಾಣೆಯ- ವಾಹನ ಕಳವು ಪ್ರಕರಣ, 10) ರಾಜನುಕುಂಟೆ ಪೊಲೀಸ್ ಠಾಣೆಯ- ವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು || ವಾಹನ ಕಳವು ಪ್ರಕರಣಗಳು ಹಾಗೂ 2-ರಾಬರಿ ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಕಾರ್ಯಾಚರಣೆಯನ್ನು ಶ್ರೀ ಸಜೀತ್ ವಿ.ಜೆ ಉಪ ಪೊಲೀಸ್ ಆಯುಕ್ತರು ಈಶಾನ್ಯ ವಿಭಾಗದವರ ಉಸ್ತುವಾರಿಯಲ್ಲಿ, ಶ್ರೀ ನವೀನಕುಮಾರ್ ಎಲ್. ಸಹಾಯಕ ಪೊಲೀಸ್ ಆಯುಕ್ತರು ದೇವನಹಳ್ಳಿ ಉಪ ವಿಭಾಗದವರ ಮಾರ್ಗದರ್ಶನದಲ್ಲಿ, ಚಿಕ್ಕಜಾಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ. ಆನಂದ.ಎನ್ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.









