ನಗರದ ವೈಟ್‌ಫೀಲ್ಡ್ ವಿಭಾಗದ ವರ್ತೂರು ಪೊಲೀಸ್ ಠಾಣಾ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ, ಮೊಬೈಲ್ ಔಟ್‌ಲೆಟ್‌ನಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವರ್ತೂರು ಗುಂಜೂರು ರಸ್ತೆಯಲ್ಲಿರುವ ಮೊಬೈಲ್ ಔಟ್‌ಲೆಟ್ ಅಂಗಡಿಯೊಂದರ ಬಾಗಿಲನ್ನು ಮುರಿದು ಕಳ್ಳತನ ನಡೆಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಕಳವು ಮಾಡಲಾಗಿದ್ದ ಒಟ್ಟು ೪೦ ಲಕ್ಷದ ೫೦ ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ವಿವರ ಹೀಗಿದೆ:
೩೯ (39)ಮೊಬೈಲ್ ಫೋನ್‌ಗಳು
೦೧(01) ಡಿಜಿಟಲ್ ಕ್ಯಾಮರಾ
೦೧(01) ಡಿಜಿಟಲ್ ವಾಚ್
೮ (08)ಗ್ರಾಂ ಚಿನ್ನಾಭರಣಗಳು
ಆರೋಪಿಗಳ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಈ ಕಳ್ಳತನ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿದ ವರ್ತೂರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇದು, ಬೆಂಗಳೂರು ನಗರ ವೈಟ್‌ಫೀಲ್ಡ್ ವಿಭಾಗದಿಂದ ಬಂದ ವರದಿ









