ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ್ ಜಿಲ್ಲೆ ಬೀದರ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಹುಮನಾಬಾದ ಪೊಲೀಸ್ ಠಾಣಾ ವ್ಯಾಪ್ತಿಯ ರಾಜರಾಜೇಶ್ವರಿ ದೇವಸ್ಥಾನದಲ್ಲಿರುವ ದಾನ ಪಟ್ಟಿಗೆ ಕಳ್ಳತನ ಪ್ರಕರಣದ ಪತ್ತೆ ಕುರಿತು ಶ್ರೀ ಜೆ.ಎಸ್ ನ್ಯಾಮಗೌಡರ್ ಪೊಲೀಸ ಉಪಾಧಿಕ್ಷಕರು ಹುಮನಾಬಾದ ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ ಶ್ರೀ ಗುರುಲಿಂಗಪ್ಪಾ ಗೌಡ ಎಮ್. ಪಾಟೀಲ್ ಸಿ.ಪಿ.ಐ ಹುಮನಾಬಾದ ವೃತ್ತ ರವರ ನೇತೃತ್ವದಲ್ಲಿ ಶ್ರೀ ಸುರೇಶಕುಮಾರ ಚವ್ಹಾಣ, ಪಿಎಸ್ಐ (ಕಾ.ಸು) ಹಾಗೂ ಸಿಬ್ಬಂದಿ ರವರಾದ ಶ್ರೀ ಬಸವರಾಜ, ಶ್ರೀ ಸೂರ್ಯಕಾಂತ, ಶ್ರೀ ಶಿವಶರಣ, ಶ್ರೀ ನಾಗೇಶ, ಶ್ರೀ ಚನ್ನವೀರ, ಶ್ರೀ ಉಮೇಶ, ಶ್ರೀ ಗಂಗಾಧರ ರವರನ್ನೊಳಗೊಂಡ ವಿಶೇಷ ತಂಡ ರಚನೆ ಮಾಡಿದ್ದು, ತಂಡವು ಸಿ ಸಿ ಕ್ಯಾಮರಾ ಮುಖ್ಯವಾಗಿ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ನೂತನವಾಗಿ ಸ್ಥಾಪಿತಗೊಂಡ ಸಿ.ಸಿ ಟಿ.ವಿ ಕಂಟ್ರೋಲ ಕಮಾಂಡ್ ಸೆಂಟರ್ ವಿಭಾಗದಲ್ಲಿನ ಸಿಸಿ ಕ್ಯಾಮರಾ ಫುಟೇಜ ಆಧಾರದಿಂದ ಆರೋಪಿತರು ಕಳವು ಮಾಡಲು ಬಳಸಿದ ವಾಹನವನ್ನು ಖಚಿತ ಪಡಿಸಿಕೊಂಡು ಆರೋಪಿತರನ್ನು ಹುಮನಾಬಾದದ ಧುಮ್ಮನಸೂರ ಗ್ರಾಮದ ಹತ್ತಿರ ವಶಕ್ಕೆ ಪಡೆದು ಅವರಿಂದ ಕಳ್ಳತನ ಮಾಡಿದ ನದು ಹಣ 42,500=00ರೂಪಾಯಿ, ಮತ್ತು ಕೃತ್ಯಕ್ಕೆ ಬಳಸಿದ ಎಂಟು ಲಕ್ಷ ಮೌಲ್ಯದ ಎರಡೂ ಕಾರ ಹೀಗೆ ಒಟ್ಟು 8,42,500=00 ರೂಪಾಯಿ ಮೌಲದ್ಯದವುಗಳನ್ನು ವಶ ಪಡಿಸಿಕೊಂಡು ವಿಚಾರಣೆಯಲ್ಲಿ ಆರೋಪಿತರು ಬೀದರ ಜಿಲ್ಲೆಯ ಬೀದರ ಗ್ರಾಮೀಣ ಪೊಲೀಸ್ ಠಾಣೆಯ ಮತ್ತು ತೆಲಂಗಾಣಾ ರಾಜ್ಯದ ಜಹಿರಾಬಾದ ಪೊಲೀಸ್ ಠಾಣೆಯ ಕಳ್ಳತನ ಪ್ರಕರಣಗಳಲ್ಲಿ ಬಾಗಿಯಾಗಿರುವ ಬಗ್ಗೆ ತಿಳಿದು ಬಂದಿದ್ದರಿಂದ ಆರೋಪಿತರ ವಿರುದ್ದ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗಿದೆ.

ಅಂತರರಾಜ್ಯ ಕಳ್ಳರ ಬಂಧನಕ್ಕೆ ಅತೀ ಚಾಕ ಚಾಕತ್ಯೆಯಿಂದ ಕಳ್ಳತನ ಪ್ರಕರಣವನ್ನು ಭೇದಿಸಿದ ಹುಮನಾಬಾದ ಉಪ-ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಪ್ರಕರಣದ ತನಿಖೆಯಲ್ಲಿ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ಸ್ಥಾಪಿತಗೊಂಡ ಅತ್ಯಾಧುನಿಕ ಸಿ.ಸಿ ಟಿ.ವಿ ಕಂಟ್ರೋಲ ಕಮಾಂಡ್ ಸೆಂಟರ್ ಸಹಕಾರಿಯಾಗಿದ್ದು, ಈ ಸೆಂಟರ್ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ, ಪತ್ತೆ ಕಾರ್ಯ ಅಪರಾಧಧ ಮೇಲೆ ನೀಗಾ ವಹಿಸಲು ಸಹಾಯಕವಾಗಿದ್ದು, ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ..









