ದಿನಾಂಕ:16.07.2024ರಂದು ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಕೊತ್ತನೂರು ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಕಾಲೇಜೊಂದರಲ್ಲಿ ಓರ್ವ ವಿದ್ಯಾರ್ಥಿಯು, ಆತನ ಕಾಲೇಜು ಸೇರಿದಂತೆ, ಇನ್ನಿತರೆ ಎರಡು ಕಾಲೇಜ್‌ಗಳ ಬಳಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಮಾಹಿತಿಯ ಆಧಾರದ ಮೇರೆಗೆ ಕೊತ್ತನೂರು ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಯವರು ಥಣಿಸಂದ್ರ ಮುಖ್ಯ ರಸ್ತೆಯ, ಹಜ್ ಭವನದ ಪಕ್ಕ ರಾತ್ರಿ ಸಾರ್ವಜನಿಕರಿಗೆ ಮತ್ತು ಕಾಲೇಜು ವಿಧ್ಯಾರ್ಥಿಗಳಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಓರ್ವನನ್ನು ವಶಕ್ಕೆ ಪಡೆದು, ಆತನ ವಶದಲ್ಲಿದ್ದ 2.5 ಕೆ.ಜಿತೂಕದ ಗಾಂಜಾವನ್ನು ಮತ್ತು ಒಂದು ಕಾಲೇಜಿನ ಬ್ಯಾಗ್ ಹಾಗೂ ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಯಿತು. ಇವುಗಳ ಮೌಲ್ಯ 1,00,000/- (ಒಂದು ಲಕ್ಷ ರೂಪಾಯಿ)ನಂತರ ಠಾಣೆಗೆ ಕರೆತಂದು ಆತನ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿರುತ್ತದೆ.
ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಮಾನ್ಯ ಸಜೀತ್ ವಿ ಜೆ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ಸಂಪಿಗೆಹಳ್ಳಿ ರವರ ಸಲಹೆ ಸೂಚನೆಯಂತೆ, ಕೊತ್ತನೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರು ಮತ್ತು ಅಧಿಕಾರಿ/ಸಿಬ್ಬಂದಿಯವರುಗಳು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









