ವಿ.ವಿ.ಪುರಂ ಪೊಲೀಸ್ ಠಾಣಾ ಸರಹದ್ದಿನ ಸಜ್ಜನರಾವ್ ಸರ್ಕಲ್‌ನಲ್ಲಿ ವಾಸವಿರುವ ಫಿರಾದುದಾರರು, ತಮ್ಮ ಮನೆಯ ಹತ್ತಿರವಿರುವ ಶ್ರೀ.ಸತ್ಯನಾರಾಯಣಸ್ವಾಮಿ ದೇವಸ್ಥಾನದ ಮುಂಭಾಗ ದಿನಾಂಕ:17/06/2024 ರಂದು ರಾತ್ರಿ ವೇಳೆಯಲ್ಲಿ ಟೆಂಪೊ ಟ್ರಾವೆಲ್ಲ ವಾಹನವನ್ನು ನಿಲ್ಲಿಸಿದ್ದು, ಮಾರನೆಯ ದಿನ ಬಂದು ನೋಡಲಾಗಿ, ಯಾರೋ ಕಳ್ಳರು ಟೆಂಪೊ ಟ್ರಾವೆಲ್ಡರ್‌ನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರನ್ನು ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ನೀಡಿದ್ದು, ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
ತನಿಖೆಯನ್ನು ಮುಂದುವರೆಸಿದ. ವಿ.ವಿ.ಪುರಂ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ಹಲವಾರು ಸಿ.ಸಿ. ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಪಡೆದು, ಓರ್ವ ವ್ಯಕ್ತಿಯನ್ನು ದಿನಾಂಕ:23/06/2024 ರಂದು ವಶಕ್ಕೆ ಪಡೆದು. ವಿಚಾರಣೆ ಮಾಡಲಾಗಿ, ಆತನು ಈ ಪ್ರಕರಣದಲ್ಲಿ ಕಳ್ಳತನ ಮಾಡಿರುವುದಾಗಿ ತಪ್‌ಪ್ಪಿಕೊಂಡಿರುತ್ತಾನೆ. ದಿನಾಂಕ:24/06/2024 ರಂದು ಆತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಡಿಸಿ, 5 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಆತನು ನೀಡಿದ ಮಾಹಿತಿ ಮೇರೆಗೆ ಸುಮಾರು 7 I8,00,000/- ಬೆಲೆ ಬಾಳುವ Ol-ಟೆಂಪೊ ಟ್ರಾವೆಲ್ಲರ್, 03-ಪ್ಯಾಸೆಂಜರ್ ಆಟೋರಿಕ್ಷಾ, 03-ದ್ವಿ-ಚಕ್ರ ವಾಹನಗಳನ್ನು ನ್ಯಾಷನಲ್ ಕಾಲೇಜ್ ಮೆಟ್ರೋ ಸ್ಟೇಷನ್ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು. ನಂತರ ಆತನನ್ನು ದಿನಾಂಕ:28/06/2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಲೋಕೇಶ್ ಭರಮಪ್ಪ ಜಗಲಾಸರ ಐ.ಪಿ.ಎಸ್ರವರ ಮಾರ್ಗದರ್ಶನದಲ್ಲಿ ವಿ.ವಿ.ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಶಾಮೀದ್ ಬಾಷಾ ರವರ ನೇತೃತ್ವದಲ್ಲಿ, ವಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್‌ಪೆಕ್ಟರ್ ಶ್ರೀ. ಟಿ.ಎಂ.ಧಮೆರ್ಂದ್ರ ರವರ ಅಧಿಕಾರಿ/ಸಿಬ್ಬಂದಿರವರು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.










