ಬೆಂಗಳೂರು ನಗರ, ಬಸವೇಶ್ವರನಗರ ಪೊಲೀಸ್ ಠಾಣಾ ಸರಹದ್ದಿನ ವಾಸಿ ಹಾಗೂ ರೌಡಿ ವ್ಯಕ್ತಿಯಾದ ಎ.ಆರ್.ಅಶೋಕ್ ಕುಮಾರ್ ಅಡಿಗ ಬಿನ್ ರಾಜ್‌ಗೋಪಾಲ್ ಅಡಿಗ, 59 ವರ್ಷ ಈತನು ಗ್ಯಾಂಬ್ಲಿಂಗ್, ವಂಚನೆ, ದುಬಾರಿ ಬಡ್ಡಿ ವಸೂಲು ಮಾಡುವ ಅಪರಾಧ ಕೃತ್ಯಗಳಲ್ಲಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರ್ಭೀತಿಯಿಂದ ಭಾಗಿಯಾಗಿದ್ದನು. ಕಳೆದ 02 ವರ್ಷಗಳಲ್ಲಿ ಈತನ ವಿರುದ್ದ 07 ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಸಾಮಾನ್ಯ ಕಾನೂನು ಕ್ರಮಗಳಿಂದ ಈತನ ಸಮಾಜಘಾತುಕ ಕಾನೂನು ಬಾಹಿರ ಕೃತ್ಯಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯ.ವಾಗಿರುವುದರಿಂದ, ಈತನನ್ನು ಪ್ರತಿಬಂಧಕ ಕಾಯಿದೆ පයි ಬಂಧನದಲ್ಲಿಡಲು ಬಸವೇಶ್ವರನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಯವರ ಪ್ರಸ್ತಾವನೆಯಂತೆ ಡಿಸಿಪಿ ಪಶ್ಚಿಮ ವಿಭಾಗ ರವರು ಶಿಫಾರಸ್ಸು ಮಾಡಿದ್ದು, ಅದರಂತೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರು,
ರವರು ದಿನಾಂಕ:10.06.2024 ರಂದು ಬಂಧನದ ಆಜ್ಞೆಯನ್ನು ಜಾರಿಗೊಳಿಸಿರುತ್ತಾರೆ.
ಅದರಂತೆ ಬಸವೇಶ್ವರನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಬಂಧನ ಆದೇಶವನ್ನು ಜಾರಿಗೊಳಿಸಿ, ರೌಡಿ ವ್ಯಕ್ತಿಯಾದ ಎ.ಆರ್.ಅಶೋಕ್ ಕುಮಾರ್ ಅಡಿಗ ಈತನ ವಿರುದ್ಧ ದಸ್ತಗಿರಿ ಕ್ರಮ ಅನುಸರಿಸಿ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿರುತ್ತಾರೆ.










