ರಾಮಮೂರ್ತಿ ನಗರ ಪೊಲೀಸ್ ಠಾಣಾ ಸರಹದ್ದಿನ ಕಬೇರೆ, ಎನ್.ಆರ್.ಐ ಲೇಔಟ್ನ ಸಾರ್ವಜನಿಕ ರಸ್ತೆಯಲ್ಲಿ ದಿನಾಂಕ:07.07 2024 ರಂದು ರಾತ್ರಿ ಪಿರಾದುದಾರರು ದ್ವಿ-ಚಕ್ರ ವಾಹನದಲ್ಲಿ ತನ್ನ ಸ್ನೇಹಿತನ ಜೊತೆ ಹೋಗುತ್ತಿದ್ದಾಗ ಮೂವರು ವ್ಯಕ್ತಿಗಳು ಪಿರ್ಯಾದುದಾರರ ದ್ವಿ-ಚಕ್ರ ವಾಹನವನ್ನು ಅಡ್ಡಗಟ್ಟಿ ಅವರ ಬಳಿಯಲ್ಲಿದ್ದ ಒಂದು ಫಾಸ್ಟಾರ್ ವಾಚ್ ಮತ್ತು ಒಂದು ಐಟೇಲ್ ಕಂಪನಿಯ ಮೊಬೈಲ್ ಪೋನ್ ಅನ್ನು ಕಿತ್ತುಕೊಂಡು ಸದ್ದು ಮೊಬೈಲ್ನ ಫೋನ್ ಪೇ ಮೂಲಕ 3700/-ಹಣವನ್ನು ಆರೋಪಿಯೊಬ್ಬ ತನ್ನ ಖಾತೆಗೆ ಜಮಾ ಮಾಡಿಕೊಂಡಿರುವುದಾಗಿ ಪಿರ್ಯಾದುದಾರರು ದೂರನ್ನು ಸಲ್ಲಿಸಿದ್ದು, ಈ ಕುರಿತು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪಕರಣ ದಾಖಲಿಸಿರುತ್ತಾರೆ.
ಈ ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು ದಿನಾಂಕ:08.07.2024 ರಂದು ಎನ್.ಆರ್.ಐ ಲೇಔಟ್ನ ಡಬಲ್ ರೋಡ್ ಬಳಿ ಆರೋಪಿಗಳನ್ನು ವಶಕ್ಕೆ ಪಡೆದು, ಅವರ ಹೇಳಿಕೆಯ ಮೇರೆಗೆ ಆರೋಪಿಗಳು ಸುಲಿಗೆ ಮಾಡಲು ಬಳಸಿದ್ದ ಒಂದು ಬಜಾಜ್ ಪ್ಲಾಟಿನಾ ದ್ವಿ-ಚಕ್ರ ವಾಹನವನ್ನು ಹಾಗೂ ಪ್ರಕರಣದ ಪಿರ್ಯಾದುದಾರರಿಗೆ ಸಂಬಂಧಿಸಿದ ಒಂದು ಐಟೇಲ್ ಕಂಪನಿಯ ಮೊಬೈಲ್ ಪೋನ್ ಒಂದು ಫಾಸ್ಟಾರ್ ಕಂಪನಿಯ ವಾಜ್ ಮತ್ತು ಆರೋಪಿತರುಗಳು ಪಿರ್ಯಾದುದಾರರಿಂದ ಪೋನ್ ಪೇ ಮಾಡಿಸಿಕೊಂಡಿದ್ದ ಕೆ 3700/- ನಗದು ಹಣವನ್ನು ಹಾಗೂ ಆರೋಪಿತರುಗಳ ಒಂದು ಐ ಫೋನ್, ಮೊಬೈಲ್ ಪೋನ್ ಮತ್ತು ಒಂದು ಒನ್ ಪ್ಲಸ್ ಮೊಬೈಲ್ ಪೋನ್ಗಳನ್ನು ವಶಕ್ಕೆ ಪಡೆದುಕೊಂಡಿರುತ್ತದೆ. ಇವುಗಳ ಒಟ್ಟು ಮೌಲ್ಯ ಸುಮಾರು 170000/-(ಒಂದು ಲಕ್ಷ ಎಪ್ಪತ್ತು ಸಾವಿರ ರೂಪಾಯಿ) ಆಗಿರುತ್ತದೆ. ನಂತರ Do:09.07.2024 ಮಾನ್ಯ ನ್ಯಾಯಾಲಯಕ್ಕೆ ಹಾಜರಡಿಸಿರುತ್ತದೆ. ಮನ
ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಪ್ರಕರಣದಿಂದ ಆರೋಪಿಗಳ ವಿರುದ್ಧ ರಾಮಮೂರ್ತಿ ಪೊಲೀಸ್ ಠಾಣೆಯ ಒಟ್ಟು ಎರಡು ಸುಲಿಗೆ ಪಕರಣಗಳು ಪತ್ತೆಯಾಗಿರುತ್ತಾವೆ.
ಆರೋಪಿಗಳು ಮಧ್ಯಾನ ಸೀಗರೇಟ್ ಸೇರಿದಂತೆ ಇತರೆ ತಮ್ಮ ದುಶ್ಚಟಗಳನ್ನು ಪೂರೈಸಿಕೊಳ್ಳಲು ಹಣಕಾಸಿನ ಸಮಸ್ಯೆ ಇದುದರಿಂದ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಆರೋಪಿಗಳು ರಾತ್ರಿ ವೇಳೆಯಲ್ಲಿ ರಸ್ತೆಯಲ್ಲಿ ಹೋಗುವ ದಾರಿಹೋಕರನ್ನು ಅಡಗಟ್ಟಿ ಅವರ ಬಳಿಯಿಂದ ಮೊಬೈಲ್ ಫೋನ್ ಮತ್ತು ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಈ ಕಾರ್ಯಚರಣೆಯನ್ನು ಬೆಂಗಳೂರು ನಗರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಡಿ.ದೇವರಾಜ
ಮತ್ತು ಬಾಣಸವಾಡಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಉಮಾಶಂಕರ ಎಂ.ಹೆಚ್ ರವರ ಮಾರ್ಗದರ್ಶನದಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಪೆಕರ್ ಶ್ರೀ ಮುತ್ತುರಾಜು, ಹೆಚ್ ಮತ್ತು ಅವರ ತಂಡದ ಈ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿರುತ್ತಾರೆ.










