ಬೆಂಗಳೂರು ನಗರ ಪೊಲೀಸ್ ಮತ್ತು ನೈಟಿಂಗೆಲ್ಸ್ ಮೆಡಿಕಲ್ ಟ್ರಸ್ಟ್ ರವರ ಜಂಟಿ ಸಹಯೋಗದೊಂದಿಗೆ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಕಾರದೊಂದಿಗೆ, ಪೊಲೀಸ್ ಆಯುಕ್ತರ ಕಛೇರಿಯ ಸಭಾಂಗಣದಲ್ಲಿ18/07/2024 ರಂದು ಉಚಿತ
ಹಮ್ಮಿಕೊಳ್ಳಲಾಯಿತು.
ವೃದ್ಧಾಶ್ರಮದ ಮುಖ್ಯಸ್ಥರ ಸಭೆಯನ್ನು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಿ.ದಯಾನಂದ, ಐ.ಪಿ.ಎಸ್, ಪೊಲೀಸ್ ಆಯುಕ್ತರು, ರವರು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ.ನಟರಾಜ್ ಮತ್ತು ಜಿಲ್ಲಾ ವೆಲ್ ಫೇರ್ ಆಫೀಸರ್ ರವರಾದ ಶ್ರೀಮತಿ ಯಮುನ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರಾದ ಶ್ರೀ ನಾಗಭೂಷಣ್, ಮತ್ತು ನೈಟಿಂಗೆಲ್ಸ್ ಮೆಡಿಕಲ್ ಟ್ರಸ್ಟ್‌ನ ಅಸೋಸಿಯೇಟ್ ಡೈರೆಕ್ಟರ್ ಶ್ರೀಮತಿ, ಸ್ವಾತಿ ಭಂಡಾರಿ, ರವರುಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನಡೆಸಿಕೊಟ್ಟಿರುತ್ತಾರೆ. ಈ ಕಾರ್ಯಕ್ರಮದಲ್ಲಿ ನಗರದ ಸುಮಾರು 23 ಉಚಿತ ವೃದ್ಧಾಶ್ರಮದಮುಖ್ಯಸ್ಥರುಗಳು ಭಾಗವಹಿಸಿರುತ್ತಾರೆ.

ಈ ಕಾರ್ಯಕ್ರಮವು ಮುಖ್ಯವಾಗಿ ಉಚಿತ ವೃದ್ಧಾಶ್ರಮದವರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವರುಗಳು ನೀಡುತ್ತಿರುವ ಸೇವೆಗಳ ಬಗ್ಗೆ ಚರ್ಚಿಸಲಾಗಿರುತ್ತದೆ. ಸಭೆಯಲ್ಲಿ ವ್ಯಕ್ತಪಡಿಸಿದ ಸಮಸ್ಯೆಗಳು ಮತ್ತು ಕುಂದುಕೊರತೆಗಳ ಬಗ್ಗೆ ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಸೂಕ್ತ ಸಲಹಾ ಸೂಚನೆಗಳನ್ನು ನೀಡಿರುತ್ತಾರೆ. ಹಾಗೂ ಹಿರಿಯ ನಾಗರಿಕರಿಗೆ ಇರುವ ಕಾನೂನು ನೆರವು, ಸರ್ಕಾರದ ಯೋಜನೆಗಳು, ಮತ್ತು ಇಲಾಖಾವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಲಾಗಿರುತ್ತದೆ. ಮತ್ತು ಹಿರಿಯರ ಸಹಾಯವಾಣಿ ಉಚಿತ ಕರೆ ಸಂಖ್ಯೆ 1090 ರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿರುತ್ತದೆ. ಈ ಕಾರ್ಯಕ್ರಮವು ಹಿರಿಯರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ.









