ಮಾಲೀಕರು ದಿನಾಂಕ:02/07/2024ರಂದು ಕೆಲಸದ ನಿಮಿತ್ತ ಊಟಿಗೆ ಹೋಗಿದ್ದು ಮಾಲೀಕರು ಮನೆಯ ಗಾರ್ಡ್‌ನನ್ನು ನೋಡಿಕೊಳ್ಳುವ ವ್ಯಕ್ತಿಗೂ ನೀಡಿ ಮನೆಯನ್ನು ನೋಡಿಕೊಳ್ಳುವಂತೆ ತಿಳಿಸಿರುತ್ತಾರೆ. ನಂತರ ಮನೆಯ ಮಾಲೀಕರು ಇಲ್ಲದಿರುವುದರಿಂದ ಮನೆಯ ಕೆಲಸದವನು ತನ್ನ ಸಹಚರರಾದ ಮತ್ತಿಬ್ಬರನ್ನು ಮನೆಗೆ ಕರೆಸಿಕೊಂಡು ಮನೆಯ ರೂಮ್‌ಗಳ ಡೋರ್‌ಲಾಕ್‌ಗಳನ್ನು ಮುಚ್ಚಿನಿಂದ ಹೊಡೆದು ಕಬೋರ್ಡ್ ಮತ್ತು ದೇವರ ಮನೆಯಲ್ಲಿದ್ದಂತಹ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನದ ಒಡವೆಗಳು ಬೆಳ್ಳಿ ಪದಾರ್ಥ, ದೇವರ ವಿಗ್ರಹಗಳು ಸಾಮಾಗ್ರಿಗಳು ರೇಷ್ಮೆ ಸೀರೆಗಳು ಮೊಬೈಲ್ ಫೋನ್‌ಗಳು & ಇತ್ಯಾದಿಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುತ್ತಾರೆ.
ಈ ಕುರಿತು ಮನೆಯ ಮಾಲೀಕರು ದೂರನು ಸದಾಶಿವನಗರ ಪೊಲೀಸ್ ಠಾಣೆಗೆ ದೂರನು ಸಲ್ಲಿಸಿರುತ್ತಾರೆ. ಪ್ರಕರಣವು ದಾಖಲಾಗಿರುತ್ತದೆ.

ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಹಲವಾರು ಸಿಸಿ ಟಿವಿ ಕಾಮರಾದ ದೃಶ್ಯವಳಿಗಳನ್ನು ಪರಿಶೀಲಿಸಿ ಈ ಕುರಿತು ಒಂದು ವಿಶೇಷ ತಂಡವನ್ನು ರಚಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಿಹಾರ ರಾಜ್ಯಕ್ಕೆ ಹೋಗಿ ದಿನಾಂಕ:07/07/2024 ರಂದು ದರ್ಭಂಗಾ ಟೌನ್ ಬಸ್ ನಿಲ್ದಾಣದ ಬಳಿ ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಈ ಮೂವರು ವ್ಯಕ್ತಿಗಳ ವಶದಲ್ಲಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದ 19 ಕೆ.ಜಿ ಬೆಳ್ಳಿ ಪದಾರ್ಥಗಳು, ರೇಷ್ಮೆ, ಸೀರೆಗಳು 2 ಸ್ಯಾಮ್‌ಸಂಗ್ ಮೊಬೈಲ್ ಫೋನ್‌ಗಳು ಕಾಮರಾ ಒಂದು ಟಾಬ್, 6 ಕೆ.ಜಿ ಕಂಚು ಮತ್ತು ತಾಮದ ಪದಾರ್ಥಗಳ ಸಮೇತ ವಶಕ್ಕೆ ಪಡೆದುಕೊಂಡಿರುತ್ತಾರೆ.
ಆರೋಪಿತರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 30 ಲಕ್ಷಬೆಲೆ ಬಾಳುವ ಒಟ್ಟು 26 ಕೆ.ಜಿ 418 ಗ್ರಾಂ ಬೆಳ್ಳಿ ಪದಾರ್ಥಗಳು 34 ಗ್ರಾಂ ತೂಕದ ಚಿನ್ನದ ಒಡವೆಗಳು 5 ರೇಷ್ಮೆ ಸೀರೆಗಳು 2 ಸ್ಮಾರ್ಟ್‌ಫೋನ್‌ಗಳು ಒಂದು ಸ್ಯಾಮ್‌ಸಂಗ್ ಟ್ಯಾಬ್, ಒಂದು ಕಾಮರ, ವಿವಿಧ ಕಂಪನಿಯ 10 ವಾಚ್‌ಗಳು 6 ಕೆ.ಜಿ ಕಂಚಿನ ಪದಾರ್ಥಗಳನ್ನು ವಶಪಡಿಸಿಕೊಂಡಿರುತ್ತದೆ.
ದಿನಾಂಕ:12/07/2024ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.
ಈ ಕಾರ್ಯವನ್ನು ಬೆಂಗಳೂರು ನಗರ ಕೇಂದ್ರ ವಿಭಾಗದ ಉಪ ಪೋಲೀಸ್ ಆಯುಕ್ತರಾದ ಶ್ರೀ ಶೇಖರ್ ಹೆಚ್, ಟೆಕ್ಕಣನವರ್, ಐ.ಪಿ.ಎಸ್. ಹಾಗೂ ಶೇಷಾದಿಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಪ್ರಕಾಶ್.ಆರ್. ರವರ ಮಾರ್ಗದರ್ಶನದಲ್ಲಿ ಸದಾಶಿವನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಪೆಕರ್ ರವರಾದ ಶ್ರೀ ಗಿರೀಶ್ ಬಿ.ಪಿ ಹಾಗೂ ಅಧಿಕಾರಿ/ಸಿಬ್ಬಂದಿಯವರು ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.










