ಪ್ರತಿಷ್ಠಿತ Apple Mobile ಕಂಪನಿಯ Airpods Pro, USB-C to Lightning Cable ಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಸಿಸಿಬಿ ದಾಳಿ. 78 ಲಕ್ಷ ಮೌಲ್ಯದ ನಕಲಿ ವಸ್ತುಗಳ ವಶ.
ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ಸರಹದ್ದಿನ ಸ್ಟೇಷನ್ ಲೈನ್, ಚಿಕ್ಕಪೇಟೆ ಅಂಗಡಿಯೊಂದರಲ್ಲಿ ಪ್ರತಿಷ್ಠಿತ Apple Mobile ಕಂಪನಿಯ ನಕಲಿ ಉಪಕರಣಗಳನ್ನು ದಾಸ್ತಾನು ಮಾಡಿಕೊಂಡು, ಕಂಪನಿಯ ಅಸಲಿ ಮಾಲುಗಳೆಂದು ಸಾರ್ವಜನಿಕರಿಗೆ ನಂಬಿಸಿ, ಮಾರಾಟ ಮಾಡುತ್ತಿದ್ದಾರೆಂದು ಭಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ, ಸಿಸಿಬಿಯ ಆರ್ಥಿಕ ಅಪರಾಧ ದಳದ ಅಧಿಕಾರಿ/ಸಿಬ್ಬಂಧಿಯವರುಗಳು ದಿನಾಂಕ:19/07/2024 ರಂದು ದಾಸ್ತಾನು ಮಾಡಿಕೊಂಡಿದ್ದ ಅಂಗಡಿಯ ಮೇಲೆ ದಾಳಿ ನಡೆಸಿ, ಮಾರಾಟದಲ್ಲಿ ತೊಡಗಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು, ಆತನಿಂದ 8,00,000(ಎಂಟು ಲಕ್ಷ ರೂಪಾಯಿ) ಮೌಲ್ಯದ ನಕಲಿ Airpods Pro, USB-C to Lightning Cable ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶ್ವಸಿಯಾಗಿರುತ್ತಾರೆ.
ಈ ಕುರಿತು ಆರೋಪಿತನ ವಿರುದ್ಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಂಡಿರುತ್ತದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿ ಹಾಗೂ ಸಿಬ್ಬಂದಿಯವರುಗಳು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.









