Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home National News

ಸರ್ಕಾರದ ಕೋಟದಡಿ ಬರುವ ಇಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ, ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು, ಅರ್ಹ ಅಭ್ಯರ್ಥಿಗಳಿಗೆ ವಂಚಿಸುತ್ತಿದ್ದ ಹತ್ತು ವ್ಯಕ್ತಿಗಳ ಬಂಧನ

CREDOPRESS MEDIA PVT LTD by CREDOPRESS MEDIA PVT LTD
December 14, 2024
in National News
0
ಸರ್ಕಾರದ ಕೋಟದಡಿ ಬರುವ ಇಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ, ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು, ಅರ್ಹ ಅಭ್ಯರ್ಥಿಗಳಿಗೆ ವಂಚಿಸುತ್ತಿದ್ದ ಹತ್ತು ವ್ಯಕ್ತಿಗಳ ಬಂಧನ
0
SHARES
35
VIEWS
Share on FacebookShare on Twitter


ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿಯವರಾದ ಪಿರಾದುದಾರರು ದಿನಾಂಕ:13/11/2024 ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ 52 ಇಂಜಿನಿಯರಿಂಗ್ ಅಭ್ಯರ್ಥಿಗಳ ಲಾಗಿನ್, ಮತ್ತು ಪಾಸ್‌ವರ್ಡ್ ಹಾಗೂ ಸಿಕ್ರೇಟ್ ಕೀ ನ್ನು ಯಾರೋ ಅಪರಿಚಿತರು ಅನಾಧಿಕೃತವಾಗಿ ಪಡೆದುಕೊಂಡು, ಅಭ್ಯರ್ಥಿಗಳ ಪರವಾಗಿ Option Entryಮಾಡಿಸಿ, ಬಿ.ಎಂ.ಎಸ್ ಇಂಜಿನಿಯರಿಂಗ್ ಕಾಲೇಜು, ಆಕಾಶ್ ಇಸ್ಪೀಟ್ಯೂಟ್ ಆಫ್ ಇಂಜಿನಿಯರಿಂಗ್, ನ್ಯೂ ಹಾರಿಜನ್ ಇಂಜಿನಿಯರಿಂಗ್ ಕಾಲೇಜುಗಳಿಗೆ ಸರ್ಕಾರದ ಕೋಟದಡಿ ಬರುವ ಇಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ, ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು, ಅರ್ಹ ಅಭ್ಯರ್ಥಿಗಳಿಗೆ ವಂಚಿತರಾಗುವಂತೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಂಚನೆ ಮಾಡಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿರುತ್ತದೆ.


ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ದೂರಿನಲ್ಲಿ ತಿಳಿಸಿರುವ 52 ಇಂಜಿನಿಯರಿಂಗ್ ಅಭ್ಯರ್ಥಿಗಳ Option Entryಮಾಡಿದ ವ್ಯಕ್ತಿಗಳನ್ನು ಪತ್ತೆ ಮಾಡುವ ಸಲುವಾಗಿ, ಆ ವ್ಯಕ್ತಿಗಳು ವಿವಿಧ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಬಳಸಿಕೊಂಡು, ಬೇರೆ ಬೇರೆ ಸ್ಥಳಗಳಾದ ಗೋವಾ, ಶಿವಮೊಗ್ಗ, ದಾವಣಗೆರೆ, ಕಡೂರು ಹಾಗೂ ಬೆಂಗಳೂರನಲ್ಲಿ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿ ಕೊಡುವ ಉದ್ದೇಶದಿಂದ, ಅಭ್ಯರ್ಥಿಗಳೆಂದು ಬಿಂಬಿಸಿ ಕೆ.ಇ.ಎ ವೆಬ್‌ಸೈಟ್‌ನಲ್ಲಿ ಕಾಲೇಜು ಮತ್ತು ಕೋರ್ಸ್ ಆಯ್ಕೆ ಮಾಡಿರುತ್ತಾರೆ. ದಿನಾಂಕ:28/11/2024 ರಂದು ನಾಲ್ವರು ವ್ಯಕ್ತಿಗಳನ್ನು ಮೆಜೆಸ್ಟಿಕ್ ಬಸ್‌ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಯಿತು. ಈ ನಾಲ್ವರು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ ಈ ಪ್ರಕರಣದಲ್ಲಿ ವಂಚನೆ ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ. ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ.


ದಿನಾಂಕ:28/11/2024 ರಂದು ನಾಲ್ವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 11 ದಿನಗಳ ಕಾಲಪೊಲೀಸ ಅಭಿರಕ್ಷೆಗೆ ಪಡೆಯಲಾಯಿತು. ಅದೇ ದಿನ ಮತ್ತಿಬ್ಬರ ಸಹಚರರ ಪೈಕಿ ಓರ್ವನನ್ನು ದೇವನಹಳ್ಳಿ ಬಸ್‌ ನಿಲ್ದಾಣದ ಬಳಿ ವಶಕ್ಕೆ ಪಡೆಯಲಾಯಿತು.
ದಿನಾಂಕ:29/11/2024 ರಂದು ದೇವನಹಳ್ಳಿಯಲ್ಲಿ ವಶಕ್ಕೆ ಪಡೆದ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು. ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ಆತನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುವ ವ್ಯಕ್ತಿಯು ಈ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆಂದು ಮಾಹಿತಿಯನ್ನು ನೀಡಿರುತ್ತಾನೆ.
ದಿನಾಂಕ:29/11/2024 ರಂದು ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂಭಾಗದಲ್ಲಿಯೇ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ, ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಹಾಗೂ ಪ್ರಕರಣದಲ್ಲಿ ಸಿ.ಇ.ಟಿ ಯಲ್ಲಿ ಅರ್ಹ ಅಭ್ಯರ್ಥಿಗಳ ಮಾಹಿತಿಯನ್ನು ಇತರೆ ಆರೋಪಿಗಳೊಂದಿಗೆ ಹಂಚಿಕೊಂಡಿರುತ್ತಾನೆ. ಅದೇ ದಿನ ಈ ಪ್ರಕರಣದ ಮತ್ತೋರ್ವ ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ಟೌನ್‌ನಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು.

ದಿನಾಂಕ:30/11/2024 ರಂದು ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುವ ಆರೋಪಿತ ವ್ಯಕ್ತಿಯನ್ನು ಹಾಗೂ ಕಡೂರು ಟೌನ್‌ನಲ್ಲಿ ವಶಕ್ಕೆ ಪಡೆದುಕೊಂಡ ವ್ಯಕ್ತಿಯನ್ನು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 9 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.
ದಿನಾಂಕ:02/12/2024 ರಂದು ಈ ಪ್ರಕರಣದಲ್ಲಿನ ಮೂವರು ಏಜೆಂಟರ್‌ಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಲಾಗಿದೆ.
ಈ ಪ್ರಕರಣದ ಒಟ್ಟು 10 ಆರೋಪಿಗಳಿಂದ 13-ಮೊಬೈಲ್ ಫೋನ್‌ಗಳು, ಕೆಲವು ದಾಖಲಾತಿಗಳು ಹಾಗೂ ಕೃತ್ಯಕ್ಕೆ ಬಳಸಿದ 3 ಲ್ಯಾಪ್‌ಟಾಪ್‌ಗಳನ್ನು ಸುಟ್ಟುಹಾಕಿದ್ದು ಅವುಗಳ ಅವಶೇಷಗಳನ್ನು ತನಿಖೆಯ ಸಲುವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ.


ಈ ಕಾರ್ಯಾಚರಣೆಯನ್ನು ಉತ್ತರ ವಿಭಾಗದ ಉಪ ಪೊಲೀಸ್‌ ಆಯುಕ್ತರಾದ ಶ್ರೀ ಸೈದುಲು ಅಡಾವತ್ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ಶ್ರೀ. ಹೆಚ್. ಕೃಷ್ಣಮೂರ್ತಿ, ಎಸಿಪಿ, ಮಲ್ಲೇಶ್ವರಂ ಉಪ ವಿಭಾಗ, ಶ್ರೀ.ಪವನ್, ಎಸಿಪಿ, ಸೆನ್ ಉತ್ತರ ವಿಭಾಗ ಮತ್ತು ಶ್ರೀ ಬಿ.ಆರ್.ಜಗದೀಶ್, ಪೊಲೀಸ್ ಇನ್ಸ್‌ಪೆಕ್ಟರ್, ಮಲ್ಲೇಶ್ವರಂ ಪೊಲೀಸ್ ಠಾಣೆ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

    CREDOPRESS MEDIA PVT LTD

    CREDOPRESS MEDIA PVT LTD

    Related Posts

    50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ
    Bengaluru City Police

    50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ

    May 13, 2026
    ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
    Bengaluru City Police

    ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ

    May 13, 2026
    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ
    Bengaluru City Police

    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

    May 12, 2026
    Next Post
    ದ್ವಿ-ಚಕ್ರ ವಾಹನ ಕಳವು ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳ ಬಂಧನ. 13 ದ್ವಿ-ಚಕ್ರ ವಾಹನಗಳ ವಶ. ಮೌಲ್ಯ 21 ಲಕ್ಷ.

    ದ್ವಿ-ಚಕ್ರ ವಾಹನ ಕಳವು ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳ ಬಂಧನ. 13 ದ್ವಿ-ಚಕ್ರ ವಾಹನಗಳ ವಶ. ಮೌಲ್ಯ 21 ಲಕ್ಷ.

    ಮನೆಗಳ ಹೊರಗೆ ಒಣಗಿಸಿದ್ದ ಮಹಿಳೆಯರ ಒಳ ಉಡುಪುಗಳು ನಾಪತ್ತೆ ಸೈಕೋ ಬಂಧನ!

    ಮನೆಗಳ ಹೊರಗೆ ಒಣಗಿಸಿದ್ದ ಮಹಿಳೆಯರ ಒಳ ಉಡುಪುಗಳು ನಾಪತ್ತೆ ಸೈಕೋ ಬಂಧನ!

    ಕಳ್ಳತನವಾದ ಕಾರು 24 ಗಂಟೆಯಲ್ಲಿ ಪತ್ತೆ

    ಕಳ್ಳತನವಾದ ಕಾರು 24 ಗಂಟೆಯಲ್ಲಿ ಪತ್ತೆ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    Adugodi Police B Dayananada Begur Police Belagavi Police Bengaluru City Police Bidar District Police Bidar Police Bommanahalli Police ccb CCB Police Cen Police CM Siddaramaiah Credo Press CREDOPRESS MEDIA Cyber Crime Davangere police drugs news Electronic city Police Halasuru Gate Police Hennur Police Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • 50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ
    • ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
    • ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved