ಹೊಸ ವರ್ಷದ ಆಚರಣೆಯನ್ನು ಬೆಂಗಳೂರು ಪೊಲೀಸರು ವಿವಿಧ ಆಶ್ರಮಗಳಲ್ಲಿ, ಆಸ್ಪತ್ರೆಗಳಲ್ಲಿ, ಅನಾಥಾಶ್ರಮಗಳಲ್ಲಿ ಆಚರಿಸಲಾಯಿತು.
ಮಡಿವಾಳ ಪೊಲೀಸ್ ಇನ್ಸ್ಪೆಕ್ಟರ್ ಮೊಹಮ್ಮದ್ರವರು ಮಾರುತಿ ನಗರಮುಖ್ಯ ರಸ್ತೆಯಲ್ಲಿರುವ ಬಾಲಾಜಿ ಮೆಡಿಕಲ್ ಸ್ಟೋರ್ ಹತ್ತಿರ ಜೀವೋದಯ ಅನಾಥಾಶ್ರಮಕ್ಕೆ ಭೇಟಿ ನೀಡಿ ಅಲ್ಲಿರುವ ಮಕ್ಕಳೊಂದಿಗೆ ಸಿಬ್ಬಂದಿಗಳೊಂದಿಗೆ ಹೊಸ ವರ್ಷದ ಆಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಿದರು.

ಮೊದಲಿಗೆ ಮಕ್ಕಳೊಂದಿಗೆ ಅಲ್ಲಿರುವ ಸಿಬ್ಬಂದಿಗಳೊಂದಿಗೆ ಸಂಭಾಷಣೆಯನ್ನು ನಡೆಸಿ, ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಕೇಳಿದರು. ನಂತರ ಮಕ್ಕಳೊಂದಿಗೆ ಕೇಕನ್ನು ಕತ್ತರಿಸಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಬೇಕಾದಸಿಹಿ ತಿನಿಸುಗಳನ್ನು, ಹಣ್ಣು ಹಂಪಲುಗಳನ್ನು ಜೀವೋದಯ ಅನಾಥಾಶ್ರಮಕ್ಕೆ ಬೇಕಾದ ಕೆಲವೊಂದು ಸಾಮಗ್ರಿಗಳನ್ನು ನೀಡಿದರು.
ಹೊಸ ವರ್ಷದ ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ತಮ್ಮ ಸಮಯವನ್ನು ಕಳೆದು ಭವಿಷ್ಯದ ಬಗ್ಗೆ ಬಹಳಷ್ಟು ಸಲಹೆಗಳನ್ನು ನೀಡಿ ಎಲ್ಲಾ ಸಮಯದಲ್ಲಿ ನಮ್ಮ ಪೊಲೀಸ್ ಇಲಾಖೆ ನಿಮ್ಮೊಂದಿಗಿರುತ್ತದೆ ಎಂದು ಧೈರ್ಯ ಹೇಳಿದರು.

ವರದಿ : ಆಂಟೋನಿ ಬೇಗೂರು









