ನಿಯತ್ತು ಎಂಬುದು ನಾಯಿಗೆ ಬಿಟ್ಟರೆ ಬೇರೆ ಯಾರಿಗೂ ಸಂಬಂಧಿಸಿದಲ್ಲ ಎಂಬುದು ಮತ್ತೊಮ್ಮೆ ಖಾತ್ರಿಯಾಗಿದೆ. ಬೆಂಗಳೂರಿನಲ್ಲಿ ದೂರದ ಊರಿಂದ ಜೀವನ ಕಟ್ಟಿಕೊಳ್ಳಲು ಬರುವ ಅದೆಷ್ಟೋ ವಲಸಿಗರಿದ್ದಾರೆ. ಆದರೆ ಮಧ್ಯಪ್ರದೇಶ ಮೂಲದ ಮನೆ ಕೆಲಸದವನೊಬ್ಬ ಮಾಲೀಕನಿಗೇ ಕನ್ನ ಹಾಕಿ ಗಡಿ ಹಾರಿದ್ದನು.
ಬೆಳ್ಳಂದೂರು ಠಾಣಾ ಸರಹದ್ದಿನ ಸರ್ಜಾಪುರ ಮುಖ್ಯ ರಸ್ತೆಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಸಾಮಿ ದಿಢೀರನೆ ನಾಪತ್ತೆಯಾಗಿದ್ದ. ಮನೆಯೊಡೆಯ ಕೆಲಸಕ್ಕೆ ಎಂದು ಹೊರಗಡೆ ಹೋದಾಗ, ಎರಡು ವರ್ಷದ ನಂಬಿಕೆ ಮೇರೆಗೆ ಕೆಲಸಗಾರನಿಗೆ ತಿಳಿಸಿದ್ದನು. ಈ ಖತರ್ನಾಕ್ ಖದೀಮ ಇದೇ ಸಮಯ ಬಳಸಿಕೊಂಡು ಬೀರುವಿನಲ್ಲಿದ್ದ ಚಿನ್ನಾಭರಣ ಸಮೇತ ಪರಾರಿಯಾಗಿದ್ದನು.
ಸತತ ಕಾರ್ಯಾಚರಣೆಯಿಂದ ಮಧ್ಯ ಪ್ರದೇಶ ರಾಜ್ಯದ ಶಹಡೋಲ್ ಜಿಲ್ಲೆಯ ಜಯದ್ಪುರ್ ಠಾಣಾ ವ್ಯಾಪ್ತಿಯ ಹೋಟೆಲ್ ಒಂದರಲ್ಲಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಮಣಪುರಂ ಗೋಲ್ಡ್ ನಲ್ಲಿ ಮಾರಾಟ ಮಾಡಿದ್ದ 141 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವುಗಳ ಒಟ್ಟು ಮೌಲ್ಯ 12 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಅಂತರಾಜ್ಯ ಕಾರ್ಯಾಚರಣೆಯನ್ನು ವೈಟ್ ಫೀಲ್ಡ್ ನ ಉಪ ಪೊಲೀಸ್ ಆಯುಕ್ತರಾದ ಡಾ.ಶಿವಕುಮಾರ್ ಗುಣಾರೇ, ಐಪಿಎಸ್ ಮತ್ತು ಮಾರತ್ತಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ.ಪ್ರಿಯದರ್ಶಿನಿ ಈಶ್ವರ ಸಾನೇಕೊಪ್ಪ ಅವರುಗಳ ಮಾರ್ಗದರ್ಶನದಲ್ಲಿ ಬೆಳ್ಳಂದೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ರಮೇಶ್ ಮತ್ತವರ ತಂಡ ಯಶಸ್ವಿಯಾಗಿಸಿದ್ದಾರೆ
ವರದಿ:- ಮೋಹನ್ ಕುಮಾರ್ ಎಸ್ ನಾಯ್ಕ್









