ವಾಹನ ಚಾಲಕರು ತಮ್ಮ ವಾಹನಗಳನ್ನು ನಿರ್ಬಂಧಿತ ಸ್ಥಳಗಳಲ್ಲಿ ಅಥವಾ ಅನಧಿಕೃತ ರೀತಿಯಲ್ಲಿ ನಿಲ್ಲಿಸಿದಾಗ ಪಾರ್ಕಿಂಗ್ ಉಲ್ಲಂಘನೆ ಸಂಭವಿಸುತ್ತದೆ. ಉದಾಹರಣೆಗೆ, ಹೆದ್ದಾರಿಯಲ್ಲಿ ಕಾರನ್ನು ನಿಲ್ಲಿಸುವುದು ಕಾನೂನುಬಾಹಿರವಾಗಿದೆ.
ಪಾರ್ಕಿಂಗ್ ಉಲ್ಲಂಘನೆಗಾಗಿ ಚಲನ್ಗಳನ್ನು ಪಾರ್ಕಿಂಗ್ ಜಾರಿ ಅಧಿಕಾರಿ ನೀಡುತ್ತಾರೆ. ಈ ಉಲ್ಲಂಘನೆಗಳಿಗೆ ದಂಡವು ಉಲ್ಲಂಘನೆಯ ಪ್ರಕಾರ ಮತ್ತು ನಗರವನ್ನು ಅವಲಂಬಿಸಿ ಬದಲಾಗುತ್ತದೆ. ಮೋಟಾರು ವಾಹನಗಳ ಕಾಯಿದೆ, 1988, ಪಾರ್ಕಿಂಗ್ ಉಲ್ಲಂಘನೆಗಾಗಿ ದಂಡವನ್ನು ವಿಧಿಸಲು ಸಂಚಾರ ಪೊಲೀಸರಿಗೆ ಅಧಿಕಾರ ನೀಡುತ್ತದೆ. ನಿಮ್ಮ ದಂಡವು ನಿಮ್ಮ ಉಲ್ಲಂಘನೆಗಳ ಆವರ್ತನವನ್ನು ಅವಲಂಬಿಸಿರಬಹುದು.

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ನಿಯಮ ಉಲ್ಲಂಘನೆ ಹೆಚ್ಚುತ್ತಿದೆ .ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರಿ ಪೊಲೀಸರಿಂದ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.ಸಂಚಾರ ನಿಯಮ ಉಲ್ಲಂಘನೆ ಮಾಡಿದ ಎಂ.ಎಲ್.ಎ ಗಾಡಿಗೆ ಇಂದು ಉಪಾರಪೇಟೆ ಸಂಚಾರ ಪೊಲೀಸ್ ಠಾಣೆ ಲಾಕ್ ಮಾಡಲಾಗಿದೆ. ಇದು ಪ್ರತಿಯೊಬ್ಬರಿಗೆ ಬಲವಾದ ಸಂದೇಶವಾಗಿದೆ.ವಾಹನವು ವಿಧಾನಸೌಧವನ್ನು ಪ್ರವೇಶಿಸಲು ಸ್ಟಿಕ್ಕರ್ ಅನ್ನು ಹೊಂದಿತ್ತು ಆದರೆ ಉಲ್ಲಂಘನೆಯು ಉಲ್ಲಂಘನೆಯಾಗಿದೆ.

ಹೌದು ಕನಿಷ್ಕ ಗ್ರಾಂಡ್ ಹೋಟೆಲ್ ಹೊರಗೆ ಗಾಂಧಿನಗರದಲ್ಲಿ ಈ ಘಟನೆ ನಡೆದಿದೆ.ಉಪರ್ ಪೇಟ್ ಸಂಚಾರಿ ಪೊಲೀಸ್ ಮಹಾಲಿಂಗಯ್ಯ ಅವರು ಎಂಎಲ್ಎ ಗಾಡಿಯನ್ನು ಲೆಕ್ಕಿಸದೆ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ MLAಗೆ ಸೇರಿದ ಇನೋವಾ ಕ್ರಿಷ್ಟ ಗಾಡಿಯನ್ನು ಬೀಗ ಹಾಕುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸಂದೇಶವನ್ನು ನೀಡಿದ್ದಾರೆ.
ಪೋಲಿಸ್ ಮಹಾಲಿಂಗಯ್ಯ ಅವರಿಗೆ ಒಂದು ದೊಡ್ಡ ಸಲ್ಯೂಟ್, ಈ ಉತ್ತಮ ಕಾರ್ಯಾಚರಣೆಗೆ ಎಲ್ಲೆಲ್ಲೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.











