“ಅಂತರ್ ರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ವಿರೋಧಿ ದಿನ” ದಂದು ಬೀದರ್ ಜಿಲ್ಲೆಯ Anti Narcotics Squad ರಿಂದ 21 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಮತ್ತು ದ್ವೀಚಕ್ರ ವಾಹನ ವಶ, ಆರೋಪಿ ಬಂಧನ”
ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಸುಂಕನಾಳ–ಉಜನಿ ರೋಡಿನ ಮುಖಾಂತರ ಮೊಟಾರ ಸೈಕಲ್ ಮೇಲೆ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವ ಮಾಹಿತಿಯಂತೆ, ಶ್ರೀ, ರಘುವೀರಸಿಂಗ್ ಠಾಕೂರ, ಸಿ.ಪಿ.ಐ ಔರಾದ-ಬಿ ವೃತ್ತ ರವರ ನೇತೃತ್ವದ ಬೀದರ ಜಿಲ್ಲೆಯ Anti Narcotics Squad ಅಧಿಕಾರಿಗಳಾದ ಶ್ರೀ, ಸಿದ್ದಲಿಂಗ ಪಿ.ಎಸ್.ಐ ಚಿಂತಾಕಿ ಠಾಣೆ, ಸಂತಪೂರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ, ಮಹೆಬೂಬ ಅಲಿ, ಔರಾದ-ಬಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ, ಉಪೇಂದ್ರ ರವರು ತಮ್ಮ ತಂಡದ ಸಿಬ್ಬಂದಿಯವರಾದ ಶ್ರೀ, ವಿಲಸನ, ಶ್ರೀ, ಶಿವಕುಮಾರ, ಶ್ರೀ, ಸಿದ್ದೇಶ್ವರ, ಶ್ರೀ, ಮಾರುತಿರೆಡ್ಡಿ, ಶ್ರೀ, ನರಸಾರೆಡ್ಡಿ, ಶ್ರೀ, ರಾಮರೆಡ್ಡಿ, ಶ್ರೀ, ಸಮದಮಿಯ್ಯಾ ರವರೊಂದಿಗೆ ಸುಂಕನಾಳ-ಜನಿ ರೋಡಿನ ಮೇಲೆ ದ್ವೀಚಕ್ರ ವಾಹನವನ್ನು ಪ್ರತಾಂಕಿತ ಅಧಿಕಾರಿ ಶ್ರೀ, ಸಂಗಯ್ಯಾ ಸ್ವಾಮಿ ತಹಶಿಲ್ದಾರರು, ಔರಾದ-ಬಿ ರವರ ಸಮಕ್ಷಮ ದಾಳಿ ಮಾಡಿ ಆರೋಪಿತರಿಂದ 20 ಕೆ.ಜಿ 790 ಗ್ರಾಂ ಗಾಂಜಾ, ಒಂದು ದ್ವೀಚಕ್ರ ವಾಹನ ಹೀಗೆ ಒಟ್ಟು 21,59,000=00ರೂಪಾಯಿ ಮೌಲ್ಯದವುಗಳನ್ನು ವಶ ಪಡಿಸಿಕೊಂಡು ಇಬ್ಬರು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ.
ದಾಳಿಯಲ್ಲಿ ಶ್ರಮಿಸಿದ Anti Narcotics Squadಅಧಿಕಾರಿ ಹಾಗು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಿ, ಬಹುಮಾನ ಮತ್ತು ಪ್ರಶ೦ಸನ ಪತ್ರ ನೀಡಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ.










