ದಿನಾಂಕ:22/07/2024 ರಂದು ಮಾಲೂರಿನ ಭಂಟಹಳ್ಳಿಯ ವಾಸಿಯಾದ ಫಿರಾದಿಯು, ಬೇಗೂರು ಪೊಲೀಸ್ ಠಾಣೆಗೆ ಬಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:31/08/2023 ರಂದು ಫಿರಾದಿಯು ಬೇಗೂರು ಮುಖ್ಯರಸ್ತೆಯಲ್ಲಿರುವ ಹೆಚ್.ಡಿ.ಎಫ್ಸಿ ಬ್ಯಾಂಕ್ ಬಳಿ ಇರುವ ಎ.ಟಿ.ಎಂ ಸೆಂಟರ್‌ನಲ್ಲಿ ಹಣ ಡ್ರಾ ಮಾಡಿಕೊಳ್ಳಲು ಹೋಗಿರುತ್ತಾರೆ. ಫಿರಾದಿಯವರಿಗೆ ಎ.ಟಿ.ಎಂ ಮಿಷಿನ್‌ನಿಂದ ಹಣ ಡ್ರಾ ಮಾಡುವ ಬಗ್ಗೆ ತಿಳಿಯದೆ ಇದುದರಿಂದ ಪಕ್ಕದಲ್ಲಿ ಇದ ಓರ್ವ ವ್ಯಕ್ತಿಗೆ ಹಣ ಡ್ರಾ ಮಾಡಿ ಕೊಡುವಂತೆ ಸಹಾಯವನ್ನು ಕೋರಿ, ಎ.ಟಿ.ಎಂ. ಕಾರ್ಡ್‌ನು, ನೀಡಿ, ಪಿನ್ ಕೋಡ್ನು ತಿಳಿಸಿರುತ್ತಾರೆ.
ಆ ವ್ಯಕ್ತಿಯು ಫಿರಾದಿಯವರು ನೀಡಿದ ಎ.ಟಿ.ಎಂ ಕಾರ್ಡ್‌ನ್ನು ಪಡೆದು, ಆ ಎ.ಟಿ.ಎಂ ಕಾರ್ಡ್‌ನ್ನು ಉಪಯೋಗಿಸದೆ, ಬೇರೊಂದು ಎ.ಟಿ.ಎಂ ಕಾರ್ಡ್‌ನ್ನು ಹಾಕಿ ಫಿರಾದಿಯವರ ಮುಂದೆ ಫಿರಾದಿಯು ನೀಡಿದ ಪಿನ್ ಕೋಡ್‌ನ್ನು ನಮೂದಿಸಿ, ಹಣ ಡ್ರಾ ಮಾಡುವಂತೆ ನಟಿಸಿ ಪ್ರಯತ್ನಪಟ್ಟಿದ್ದು, ಹಣ್ಣ ಬಾರದಿದ್ದಾಗ ಆ ಬೇರೊಂದು ಎ.ಟಿ.ಎಂ ಕಾರ್ಡ್‌ನ್ನು ಫಿರಾದಿಗೆ ಕೊಟ್ಟು ಕಳುಹಿಸಿರುತ್ತಾನೆ. ಫಿರಾದಿಯು ಆ ಎಟಿಎಂ ಕಾರ್ಡ್‌ನ್ನು ತನ್ನದೆಂದು ಭಾವಿಸಿ, ಫಿರಾದಿಯ ಊರಾದ ಮಾಲೂರಿನ ಭಂಟಹಳ್ಳಿಗೆ ಹೋಗಿರುತ್ತಾನೆ. ಊರಿಗೆ ಹೋದ ನಂತರ ಹಲವಾರು ತಿಂಗಳುಗಳ ಬೇರೊಂದು ಕಾರ್ಡ್ ಪಡೆದಿದ ಬಗೆಯಾಗಲಿ ಅಥವಾ ದಿನಾಂಕ:31/08/2023 ರಂದು 61,500/- ಡಾ ಆಗಿರುವ ಬಗ್ಗೆಯಾಗಲಿ ಗಮನಹರಿಸಿರುವುದಿಲ್ಲ. ದಿನಾಂಕ: 21/07/2024 ರಂದು ಮಾಲೂರಿನ ಭಂಟಹಳ್ಳಿಯಲ್ಲಿರುವ ಬ್ಯಾಂಕಿಗೆ ಹೋದಾಗ 61,500/- ಡಾ ಆಗಿರುವ ಬಗ್ಗೆ ತಿಳಿದಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಬೇಗೂರು ಪೊಲೀಸ್…. ಠಾಣೆಯಲ್ಲಿ ಪ್ರಕರಣ
ದಾಖಲಾಗಿರುತ್ತದೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಪಡೆದು, ದಿನಾಂಕ:23/07/2024 ರಂದು ಬೇಗೂರು ಕೆರೆಯ ಆಸುಪಾಸಿನಲ್ಲಿರುವ ಎ.ಟಿ.ಎಂ ಸೆಂಟರ್‌ಗಳ ಬಳಿ ಅನುಮಾನಸದವಾಗಿ ಓಡಾಡುತ್ತಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ವಶಕ್ಕೆ ಪಡೆದ ವ್ಯಕ್ತಿಯಿಂದ… ಒಟ್ಟು 32 ಎ.ಟಿ.ಎಂ ಕಾರ್ಡ್‌ಗಳನ್ನು ಹಾಗೂ 4,000/-ಹಣವನ್ನು ವಶಕ್ಕೆ ಪಡೆಯಲಾಯಿತು. ಆತನನ್ನು ವಿಚಾರಣೆಗೊಳಪಡಿಸಿದಾಗ, ಈ 32 ಎಟಿಎಂ ಕಾರ್ಡ್‌ಗಳು ನಿಷ್ಕ್ರಿಯಗೊಂಡಿದ್ದು. ಅವುಗಳಿಂದ ಅಮಾಯಕರುಗಳನ್ನು ವಂಚಿಸುತ್ತಿರುವ ಬಗ್ಗೆ ತಿಳಿಸಿರುತ್ತಾನೆ.
ದಿನಾಂಕ:24/07/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿ, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಆಗೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ.ಸಾರಾಫಾತೀಮಾ ರವರ ಮಾರ್ಗದರ್ಶನದಲ್ಲಿ, ಶ್ರೀ.ಮಂಜುನಾಥ್.ಆರ್ ಸಹಾಯಕ ಪೊಲೀಸ್ ಆಯುಕ್ತರು, ಎಲೆಕ್ಟ್ರಾನಿಕ್ ಸಿಟಿ ಉಪ ಪೊಲೀಸ್ ಠಾಣೆಯ ಪೊಲೀಸ್
ವಿಭಾಗ ರವರ ನೇತೃತ್ವದಲ್ಲಿ, ಎಲೆಕ್ಟ್ರಾನಿಕ್
ಶ್ರೀ.ಕೃಷ್ಣಕುಮಾರ್.ಪಿ.ಎಸ್ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.









