ಕೊತ್ತನೂರು ಪೊಲೀಸ್ ಠಾಣಾ ಸರಹದ್ದಿನ ಕೆ.ನಾರಾಯಣಮರದ ಎಲ್ಲಾವೊಂದರಲ್ಲಿ ವಾಸವಿರುವ ಫಿರಾದುದಾರರು ದಿನಾಂಕ:07/09/2024 ರಂದು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ದಿನಾಂಕ:15/08/2024 ರಂದು ರಾತ್ರಿ ಮನೆಯ ಮುಂಬಾಗಿಲನ್ನು ಲಾಕ್ ಮಾಡಿದ್ದು, ಮನೆಯ ಮಹಡಿಯ ಮೇಲಿರುವ ಬಾಗಿಲ ಚಿಲಕವನ್ನು ಹಾಕದೆ ಮಲಗಿರುತ್ತಾರೆ. ಮಲಗುವ ಮುನ್ನ ಫಿರಾದಿಯವರ ಬಳಿ ಇದ್ದ 01 ವಾಚ್, ಮೊಬೈಲ್ ಮತ್ತು ಪರ್ಸ್‌ನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟಿರುತ್ತಾರೆ. ಬೆಳಿಗ್ಗೆ ಎದ್ದು ಬಂದು ಡೈನಿಂಗ್ ಟೇಬಲ್ ಮೇಲೆ ಇಟ್ಟಿದ್ದ ವಾಚ್, ಮೊಬೈಲ್ ಮತ್ತು ವರ್ಸ್‌ನ್ನು ನೋಡಲಾಗಿ, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ವರ್ಸ್‌ನಲ್ಲಿ 1,900 ಅಮೆರಿಕನ್ ಇರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:12/09/2024 ರಂದು ಕೊತ್ತನೂರು ಪೊಲೀಸ್ ಠಾಣಾ ಸರಹದ್ದಿನ ಗುಬ್ಬಿ ಕಾಸ್ ಬಳಿ ತಿಮರಾ ರಾಜ್ಯದ ಓರ್ವ ವ್ಯಕ್ತಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದ 01-ವಾಚ್, 01-ಮೊಬೈಲ್ ಫೋನ್ ಮತ್ತು 1,900 ಅಮೆರಿಕನ್ ಡಾಲರ್‌ನ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ ಈ ಪ್ರಕರಣದಲ್ಲಿ ಕಳವು ಮಾಡಿರುವುದಾಗಿ ತಪ್‌ಪಿಕೊಂಡಿರುತ್ತಾನೆ ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿರುವ ಐಷರಾಮಿ ವಿಲ್ಲಾಗಳಲ್ಲಿ ಚಿನ್ನಾಭರಣ, ಮೊಬೈಲ್ ಫೋನ್ ಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:13/09/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 06 ದಿನಗಳ ಕಾಲ ಪೊಲೀಸ್, ಅಭಿರಕೆಗೆ ಪಡೆದುಕೊಳ್ಳಲಾಯಿತು.
ತನಿಖೆಯನ್ನು ಮುಂದುವರೆಸಿ, ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ, ಆರೋಪಿಯು ನೀಡಿದ್ದ ಮಾಹಿತಿ ಮೇರೆಗೆ ದಿನಾಂಕ:14/09/2024 ರಂದು ಹನುಮಂತನಗರದ ಬಿಳಿ ಶಿವಾಲೆಯ ಗ್ರಾಮದಲ್ಲಿರುವ ನಿರ್ಮಾಣ ಹಂತದ ಕಟಡವೊಂದರಲ್ಲಿ ಇಟ್ಟಿದ್ದ ಒಟ್ಟು 31 ವಾಚ್‌ಗಳು ಹಾಗೂ 4 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:15/09/2024 ರಂದು ಹೆಣ್ಣೂರು ಬಾಗಲೂರು ಮುಖ್ಯರಸ್ತೆಯಲ್ಲಿರುವ ನಿರ್ಮಾಣದ ಹಂತದ ಕಟ್ಟಡವೊಂದರಲ್ಲಿ 125 ಗ್ರಾಂ ಚಿನ್ನಾಭರಣಗಳು, 01 ವೈಟ್ ಗೋಲ್ಡ್ ವಾಚ್ ಮತ್ತು 2,000 ಅಮೆರಿಕನ್ ಡಾಲರ್‌ಗಳನ್ನು ವಶಪಡಿಸಿಕೊಳ್ಳಲಾಯಿತು.
ಆರೋಪಿಯು ಆಟೊ ಚಾಲಕನೊಬ್ಬನಿಗೆ 45 ಗ್ರಾಂ ಚಿನ್ನಾಭರಣವನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ದಿನಾಂಕ:16/09/2024 ರಂದು ಆಟೋ ಚಾಲಕನು ಠಾಣೆಗೆ ತಂದು ಹಾಜರುಪಡಿಸಿರುತ್ತಾನೆ. ಈ ಪ್ರಕರಣದ ಆರೋಪಿಯಿಂದ ಒಟ್ಟು 170 ಗ್ರಾಂ ಚಿನ್ನಾಭರಣಗಳು, ವಿವಿಧ ಕಂಪನಿಯ ಬೆಲೆ ಬಾಳುವ 33 ವಾಚ್‌ಗಳು, 3,900 ಅಮೇರಿಕನ್ ಡಾಲರ್ ಹಾಗೂ 05 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 21,00,000/-(ಇಪ್ಪತ್ತೊಂದು ಲಕ್ಷ ರೂಪಾಯಿ).

ದಿನಾಂಕ:18/09/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಪ್ರಕರಣದ ಆರೋಪಿಯ ಬಂಧನದಿಂದ 1) ಕೊತ್ತನೂರು ಪೊಲೀಸ್ ಠಾಣೆಯ-04 ಕನ್ನ ಕಳವು ಪ್ರಕರಣಗಳು 2)ಯಲಹಂಕ ಪೊಲೀಸ್ ಠಾಣೆಯ-02 ಕನ್ನ ಕಳವು ಪ್ರಕರಣಗಳು 3)ಚಿಕ್ಕಜಾಲ ಪೊಲೀಸ್ ಠಾಣೆಯ-02 ಕನ್ನ ಕಳವು ಪ್ರಕರಣಗಳು 4)ಬಾಗಲೂರು ಪೊಲೀಸ್ ಠಾಣೆಯ-01 ಕನ್ನ ಕಳವು ಪ್ರಕರಣ ಸೇರಿದಂತೆ ಒಟ್ಟು 09 ಕನ್ನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.

ಈ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀ. ವಿ.ಜೆ. ಸಜೀತ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಸಂಪಿಗೆಹಳ್ಳಿ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಎಂ. ಮುರುಗೇಂದಯ್ಯ ರವರ ನೇತೃತ್ವದಲ್ಲಿ, ಕೊತ್ತನೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ. ಎಂ.ಎಲ್ ಚೇತನ್ ಕುಮಾರ್ ರವರು ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









