Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Bengaluru City Police

ಕನ್ನ ಕಳವು ಮಾಡುತ್ತಿದ್ದ ಐವರು ವ್ಯಕ್ತಿಗಳ ಬಂಧನ,

CREDOPRESS MEDIA PVT LTD by CREDOPRESS MEDIA PVT LTD
December 16, 2024
in Bengaluru City Police,Latest News,Namma Police,Namma Police News
0
ಕನ್ನ ಕಳವು ಮಾಡುತ್ತಿದ್ದ ಐವರು ವ್ಯಕ್ತಿಗಳ ಬಂಧನ,
0
SHARES
7
VIEWS
Share on FacebookShare on Twitter


308 ಗ್ರಾಂ ಚಿನ್ನಾಭರಣ, 3-ಮೊಬೈಲ್ ಫೋನ್ ಹಾಗೂ 2-ದ್ವಿ-ಚಕ್ರ ವಾಹನ ವಶ. ಮೌಲ್ಯ 22.86 ಲಕ್ಷ.


ಬೇಗೂರು ಪೊಲೀಸ್‌ ಠಾಣಾ ಸರಹದ್ದಿನ, ಹೊಸ ಮೈಕೋ ಲೇಔಟ್‌ನ ಗಾರೆಬಾವಿಪಾಳ್ಯದಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:15/03/2024 ರಂದು ಬೇಗೂರು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:14/03/2024 ರ ರಾತ್ರಿ ಮನೆಯ ಮುಂಬಾಗಿಲ ಚಿಲಕವನ್ನು ಹಾಕಿಕೊಂಡು, ಪಿರಾದುದಾರರು ಮತ್ತು ಪತ್ನಿ ಒಂದು ಕೊಠಡಿಯಲ್ಲಿ ಮಲಗಿದ್ದು, ಪಿರಾದುದಾರರ ಇಬ್ಬರು ಮಕ್ಕಳು ಮತ್ತೊಂದು ಕೊಠಡಿಯಲ್ಲಿ ಮಲಗಿರುತ್ತಾರೆ. ಗ್ರೀಲ್‌ನ ಮೂಲಕ ಬಾಲ್ಕನಿಗೆ ಬಂದ ಅಪರಿಚಿತರು ಬಾಲ್ಕನಿಯಲ್ಲಿದ್ದ ಬಾಗಿಲಿನ ಪಕ್ಕದಲ್ಲಿದ್ದ ಕಿಟಕಿಯ ಮೂಲಕ ಬಾಲ್ಕನಿಯ ಬಾಗಿಲ ಚಿಲಕವನ್ನು ತೆಗೆದು ಒಳಪ್ರವೇಶಿಸಿ, ಪಿರಾದಿಯ ಮಕ್ಕಳು ಮಲಗಿರುವ ಕೊಠಡಿಯ ಕಬೋರ್ಡ್‌ನಲ್ಲಿಟ್ಟಿದ್ದ 74 ಗ್ರಾಂ ಚಿನ್ನದ ಆಭರಣಗಳು, 1-ಜೊತೆ ಬೆಳ್ಳಿಯ ಕಾಲುಚೈನ್, 1-ಮೊಬೈಲ್ ಫೋನ್‌ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:30/08/2024 ರಂದು ಪಿಳ್ಳಗಾನಹಳ್ಳಿ ಕೋಳಿ ಫಾರಂ ಗೇಟ್ ಬಳಿ ಓರ್ವ ವ್ಯಕ್ತಿಯನ್ನು ಪ್ರಕರಣದಲ್ಲಿ ಕಳುವಾಗಿದ್ದ 1-ಮೊಬೈಲ್ ಫೋನ್ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ, ಆ ವ್ಯಕ್ತಿಯು ಈ ಪ್ರಕರಣದಲ್ಲಿ ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ ಹಾಗೂ ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಸಹಚರರು ಭಾಗಿಯಾಗಿರುವುದಾಗಿ ತಿಳಿಸಿರುತ್ತಾನೆ. ಪ್ರಕರಣದಲ್ಲಿ ಕಳವು ಮಾಡಿರುವ ಚಿನ್ನಾಭರಣಗಳು ಮತ್ತು ಬೆಳ್ಳಿಯ ವಸ್ತುಗಳನ್ನು ಅಟಿಕಾ ಗೋಲ್ಡ್ ಕಂಪನಿಯಲ್ಲಿ ಅಡವಿಟ್ಟಿರುವುದಾಗಿ ಹಾಗೂ ಆರೋಪಿಗಳ ಸ್ನೇಹಿತರಿಗೆ ನೀಡಿರುವುದಾಗಿ ತಿಳಿಸಿರುತ್ತಾನೆ..


ದಿನಾಂಕ:30/08/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್’ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್‌ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಪ್ರಕರಣದಲ್ಲಿ ಕಳವು ಮಾಡಿದ್ದ 3 ಗ್ರಾಂ ಚಿನ್ನದ ಉಂಗುರವನ್ನು ದಿನಾಂಕ:09/09/2024 ರಂದು ಆರೋಪಿಯ ಸ್ನೇಹಿತನು ವಾಸವಿರುವ ತಮಿಳುನಾಡಿನ ಹೊಸೂರಿನಿಂದ ವಶಪಡಿಸಿಕೊಳ್ಳಲಾಯಿತು. ಹಾಗೂ ಕಳವು ಮಾಡಿದ ಚಿನ್ನಾಭರಣದ ಪೈಕಿ 32 ಗ್ರಾಂ ಚಿನ್ನಾಭರಣವನ್ನು ತಮಿಳುನಾಡಿನ ಹೊಸೂರಿನಲ್ಲಿರುವ ಅಟಿಕಾ ಗೋಲ್ಡ್ ಕಂಪನಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಆ ಕಂಪನಿಗೆ ನೋಟಿಸ್‌ ನೀಡಲಾಗಿರುತ್ತದೆ.
ಆರೋಪಿಯು ತಿಳಿಸಿದ ನಾಲ್ವರು ಸಹಚರರ ಬಗ್ಗೆ ತನಿಖೆ ಕೈಗೊಂಡರು ಯಾವುದೇ ಉಪಯುಕ್ತ ಮಾಹಿತಿ ದೊರೆತ್ತಿರುವುದಿಲ್ಲ.
ದಿನಾಂಕ:09/09/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ದಿನಾಂಕ:10/09/2024 ರಂದು ಅಟಿಕಾ ಗೋಲ್ಡ್ ಕಂಪನಿಯವರು 32 ಗ್ರಾಂ ಚಿನ್ನಾಭರಣವನ್ನು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಸಹಚರರ ಬಗ್ಗೆ ಪತ್ತೆಕಾರ್ಯ ಮುಂದುವರೆಸಿದ ಪೊಲೀಸರು, ದಿನಾಂಕ:18/09/2024 ರಂದು ತಮಿಳುನಾಡಿನ ಧರ್ಮಪುರಿಯಲ್ಲಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಹಾಗೂ ಅದೇ ದಿನ ಪರಪ್ಪನ ಅಗ್ರಹಾರದಲ್ಲಿರುವ ನಾಗನಾಥಪುರದಲ್ಲಿ ಮತ್ತೋರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮೂವರು ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ.

ದಿನಾಂಕ:19/09/2024 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಆರೋಪಿಗಳು ಕಳವು ಮಾಡಿದ್ದ ಚಿನ್ನಾಭರಣಗಳ ಪೈಕಿ 38 ಗ್ರಾಂ ಚಿನ್ನಾಭರಣವನ್ನು ಹಾಗೂ 2 ಮೊಬೈಲ್ ಫೋನ್ ಮತ್ತು 2-ದ್ವಿ-ಚಕ್ರ ವಾಹನವನ್ನು ಆರೋಪಿಗಳು ತಮಿಳುನಾಡಿನಲ್ಲಿರುವ ಸ್ನೇಹಿತನೊರ್ವನಿಗೆ ನೀಡಿದ್ದಾಗಿ ತಿಳಿಸಿರುತ್ತಾರೆ. ಹಾಗೂ ಆರೋಪಿಗಳ ಮತ್ತೋರ್ವ ಸ್ನೇಹಿತನಿಗೆ 31 ಗ್ರಾಂ ಚಿನ್ನದ ಚೈನನ್ನು ನೀಡಿದ್ದಾಗಿ ತಿಳಿಸಿರುತ್ತಾರೆ. ಅಲ್ಲದೆ 204 ಗ್ರಾಂ ಚಿನ್ನಾಭರಣವನ್ನು ಕೃಷ್ಣಗಿರಿಯ ಜ್ಯೂವೆಲರಿ ಅಂಗಡಿಗೆ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ.
ದಿನಾಂಕ:25/09/2024 ರಂದು ಆರೋಪಿಗಳ ಓರ್ವ ಸ್ನೇಹಿತನಿಂದ 38 ಗ್ರಾಂ ಚಿನ್ನಾಭರಣವನ್ನು ಹಾಗೂ 2 ಮೊಬೈಲ್ ಫೋನ್ ಮತ್ತು 2-ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಯಿತು.


26/09/2024 ರಂದುವಶಪಡಿಸಿಕೊಳ್ಳಲಾಯಿತು.ಮತ್ತೋರ್ವ ಸ್ನೇಹಿತನಿಂದ 31 ಚಿನ್ನದ ಚೈನನ್ನು
ದಿನಾಂಕ:28/09/2024 ರಂದು 204 ಗ್ರಾಂ ಚಿನ್ನಾಭರಣವನ್ನು ಕೃಷ್ಣಗಿರಿಯಲ್ಲಿರುವ ಜ್ಯೂವಲರಿ ಅಂಗಡಿಯಿಂದ ವಶಪಡಿಸಿಕೊಳ್ಳಲಾಯಿತು.
ಒಟ್ಟಾರೆಯಾಗಿ ಈ ಪ್ರಕರಣದ ಆರೋಪಿಗಳ ಬಂಧನದಿಂದ 308 ಗ್ರಾಂ ಚಿನ್ನಾಭರಣ, 3 ಮೊಬೈಲ್ ಫೋನ್ ಹಾಗೂ 2 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಮೌಲ್ಯ 7 22,86,000/-(ಇಪ್ಪತ್ತೆರಡು ಲಕ್ಷದ ಎಂಬತ್ತಾರು ಸಾವಿರ ರೂಪಾಯಿ).
ದಿನಾಂಕ:28/09/2024 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮತ್ತೋರ್ವ ವ್ಯಕ್ತಿಯನ್ನು ದಿನಾಂಕ:15/10/2024 ರಂದು ಪರಪ್ಪನ ಅಗ್ರಹಾರದಲ್ಲಿರುವ ಭಾಷೆ ಕಂಪನಿಯ ಬಳಿ ವಶಕ್ಕೆ ಪಡೆದು, ವಿಚಾರಣೆ ಮಾಡಲಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ದಿನಾಂಕ:16/10/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.


ಈ ಪ್ರಕರಣದ ಆರೋಪಿಗಳ ಬಂಧನದಿಂದ 1) ಬೇಗೂರು ಪೊಲೀಸ್ ಠಾಣೆಯ-08 ಮನೆ ಕನ್ನ ಕಳವು ಪ್ರಕರಣಗಳು, 2) ಹುಳಿಮಾವು ಪೊಲೀಸ್ ಠಾಣೆಯ-01 ಮನೆ ಕನ್ನ ಕಳವು ಪ್ರಕರಣ, 3) ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯ-01 ಮನೆ ಕನ್ನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ತಮಿಳುನಾಡು ರಾಜ್ಯದ ಒಟ್ಟು 5 ವಿವಿಧ ಪೊಲೀಸ್‌ ಠಾಣೆಗಳ ಪ್ರಕರಣಗಳಲ್ಲಿ ಆರೋಪಿಗಳ ಬೆರಳು ಮುದ್ರೆಯು ಹೊಂದಾಣಿಕೆಯಾಗಿರುತ್ತದೆ.
ಆಗ್ನೆಯ ವಿಭಾಗದ ಉಪ ಪೊಲೀಸ್‌ ಆಯುಕ್ತರವರಾದ ಶ್ರೀಮತಿ, ಸಾರಾ ಫಾತಿಮಾ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತರವರಾದ ಶ್ರೀ.ಮಂಜುನಾಥ ಆರ್ ರವರ ನೇತೃತ್ವದಲ್ಲಿ ಬೇಗೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಕೃಷ್ಣಕುಮಾರ ಪಿ.ಎಸ್ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

    Tags: Bengaluru City PoliceKarnataka State PoliceNamma PoliceNamma Police NewsPolice NewsPrime News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು
    Bengaluru City Police

    ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು

    July 28, 2026
    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    Bengaluru City Police

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    July 24, 2026
    ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ
    Bengaluru District Police

    ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ

    July 23, 2026
    Next Post
    ಕನ್ನ ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ.

    ಕನ್ನ ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ.

    ಬೀದರ್ ಸೈಬರ್ ಅಪರಾಧ ( ಸಿ.ಇ.ಎನ್) ಪೊಲೀಸ್ ರಿಂದ 54 ಸಾವಿರಕ್ಕೂ ಅಧಿಕ ಮೌಲ್ಯದ ಅಕ್ರಮ ನಾರ್ಕೋಟಿಕ್ ಅಂಶ ಇರುವ ಔಷಧಿ ಬಾಟಲಗಳು ಮತ್ತು ಮಾತ್ರೆಗಳು, ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನ ವಶ. ಮೂರು ಜನ ಆರೋಪಿತರ ಬಂಧನ

    ಬೀದರ್ ಸೈಬರ್ ಅಪರಾಧ ( ಸಿ.ಇ.ಎನ್) ಪೊಲೀಸ್ ರಿಂದ 54 ಸಾವಿರಕ್ಕೂ ಅಧಿಕ ಮೌಲ್ಯದ ಅಕ್ರಮ ನಾರ್ಕೋಟಿಕ್ ಅಂಶ ಇರುವ ಔಷಧಿ ಬಾಟಲಗಳು ಮತ್ತು ಮಾತ್ರೆಗಳು, ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನ ವಶ. ಮೂರು ಜನ ಆರೋಪಿತರ ಬಂಧನ

    ದ್ವಿ-ಚಕ್ರ ವಾಹನಗಳನ್ನು, ಕಳ್ಳತನ ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ. 14 ದ್ವಿ-ಚಕ್ರ ವಾಹನಗಳ ವಶ. ಮೌಲ್ಯ 10 ಲಕ್ಷ

    ದ್ವಿ-ಚಕ್ರ ವಾಹನಗಳನ್ನು, ಕಳ್ಳತನ ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ. 14 ದ್ವಿ-ಚಕ್ರ ವಾಹನಗಳ ವಶ. ಮೌಲ್ಯ 10 ಲಕ್ಷ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    Adugodi Police B Dayananada Begur Police Belagavi Police Bengaluru City Police Bidar District Police Bidar Police Bommanahalli Police ccb CCB Police Cen Police CM Siddaramaiah Credo Press CREDOPRESS MEDIA Cyber Crime Davangere police drugs news Electronic city Police Hennur Police Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು
    • ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    • ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved