ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಬೀದರ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ತೆಲಂಗಾಣ ರಾಜ್ಯದ ಹೈದ್ರಾಬಾದ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ-65ರ ಮುಖಾಂತರ ಮಹಾರಾಷ್ಟ್ರ ರಾಜ್ಯಕ್ಕೆ ಅನಧೀಕೃತವಾಗಿ ಗಾಂಜಾವನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಮಾಹಿತಿಯಂತೆ, ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೀದರ, ರವರ ಮುಂದಾಳತ್ವದಲ್ಲಿ ಶ್ರೀ ಜೆ.ಎಸ್ ನ್ಯಾಮೇಗೌಡರ, ಪೊಲೀಸ್ ಉಪಾಧೀಕ್ಷಕರು, ಹುಮನಾಬಾದ ಹಾಗೂ ಶ್ರೀ ಕೃಷ್ಣಕುಮಾರ ಪಾಟೀಲ್, ಸಿ.ಪಿ.ಐ ಮಂಠಾಳ ರವರ ನಿದರ್ಶನದಂತೆ, ಶ್ರೀ ನಾಗೇಂದ್ರ ಪಿ.ಎಸ್.ಐ (ಕಾ.ಸೂ) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯವರಾದ ಶ್ರೀ ವಿಠಲ, ಶ್ರೀ ಬಲವಂತರೆಡ್ಡಿ, ಶ್ರೀ ದೇವಿಂದ್ರ, ಶ್ರೀ ವಿಶ್ವನಾಥ, ಶ್ರೀ ಮಾರುತಿ, ಶ್ರೀ ಬಸವರಾಜ ರವರೊಂದಿಗೆ ರಾಜೇಶ್ವರ ಓವರ್ ಬ್ರಿಡ್ಡ ರಾ.ಹೆದ್ದಾರಿ-65 ಮೇಲೆ ಗೆಜೆಟೆಡ್ ಅಧಿಕಾರಿರವರಾದ ಡಾ| ಬಾಲಕೃಷ್ಣ ರಾಠೋಡ್ ರವರ ಸಮಕ್ಷಮದಲ್ಲಿ ಕಾರನ್ನು ನಿಲ್ಲಿಸುವಂತೆ ಕೈ ಮಾಡಿದಾಗ ಕಾರ ಚಾಲಕನು ಪೊಲೀಸರಿಗೆ ನೋಡಿ ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ರೋಡಿನ ಬದಿಯ ಡಿವೈಡರಗೆ ಡಿಕ್ಕಿ ಪಡಿಸಿದ್ದರಿಂದ ಕಾರಿನಲ್ಲಿದ್ದ 2-3 ಪ್ಯಾಕೇಟ್‌ಗಳು ಹೊರಗೆ ಬಿದಿದ್ದು, ಕಾರಲ್ಲಿ ಇದ್ದ ಇಬ್ಬರು ವ್ಯಕ್ತಿಗಳಿಗೆ ಯಾವುದೇ ಗಾಯಗಳಾಗಿರುವದಿಲ್ಲ. ನಂತರ ಕಾರನ್ನು ಪರಿಶೀಲನೆ ಮಾಡಿದಾಗ ಕಾರಿನಲ್ಲಿ ಒಟ್ಟು 123 kg ಗಾಂಜಾ ಅಃಕಿ 1,23,90,000=00 ರೂಪಾಯಿ, ಒಂದು ಕಾರು ಅಃಕಿಃ 2,00,000=00ರೂಪಾಯಿ ಹೀಗೆ ಒಟ್ಟು 1,25,90,000=00ರೂ ಮೌಲ್ಯದ ಗಾಂಜಾ & ಕಾರ ವಶ ಪಡಿಸಿಕೊಂಡು ಇಬ್ಬರು ಆರೋಪಿತರನ್ನು ಕಾನೂನು ರೀತ್ಯ ಕ್ರಮ ಕೈಗೊಂಡು ನ್ಯಾಯಾಂಗ ಬಂದನಕ್ಕೆ ಕಳುಹಿಸಿರುತ್ತಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿರವರ ಈ ಯಶಸ್ವಿ ಕಾರ್ಯಚರಣೆ, ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಲಾಗಿದೆ.
ಬೀದರ ಜಿಲ್ಲೆಯನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ.









