ಮಾನ್ಯ ಶ್ರೀ ಪ್ರದೀಪ್ ಗುಂಟಿ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಬೀದರ, ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಬೀದರ ಮನ್ನಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದ ಪತ್ತೆ ಕುರಿತು ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಬೀದರ, ರವರ ಮುಂದಾಳತ್ವದಲ್ಲಿ ಶ್ರೀ ಶಿವನಗೌಡಾ ಪಾಟೀಲ, ಪೊಲೀಸ್ ಉಪಾಧೀಕ್ಷಕರು ಬೀದರ ರವರ ನೇತೃತ್ವದಲ್ಲಿ ಬೀದರ ಗ್ರಾಮೀಣ ವೃತ್ತ ಸಿ.ಪಿ.ಐ ಶ್ರೀ ಜಿ.ಎಸ್ ಬಿರಾದಾರ, ಮನ್ನಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಮತಿ ನಂದಿನಿ, ಸಿಬ್ಬಂದಿರವರಾದ ಶ್ರಿ ರಾಜು, ಶ್ರೀ ಲಿಂಗರಾಜ, ಶ್ರೀ ಗಣೇಶ, ರವರನ್ನೊಳಗೊಂಡ ತಂಡವನ್ನು ರಚಿಸಿದ್ದು, ತಂಡವು ಸಿ.ಸಿ ಟಿ.ವಿ ಕಂಟ್ರೋಲ ಕಮಾಂಡ್ ಸೆಂಟರ್ ವಿಭಾಗದಲ್ಲಿನ ಸಿಸಿ ಕ್ಯಾಮರಾ ಫುಟೇಜ, ಪೊಲೀಸ್ ಬಾತ್ಮಿದಾರರಿಂದ ಪಡೆದ ಮಾಹಿತಿ ಆಧಾರದ ಮೇರಗೆ ಆರೋಪಿತರನ್ನು ವಶಕ್ಕೆ ಪಡೆದು ಅವರಿಂದ 9 ಗ್ರಾಂ 2 ಗುಂಜಿ ಬಂಗಾರ ಅ:ಕಿ: 72,000=00 ರೂಪಾಯಿ ಮತ್ತು ಒಂದು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಅ:ಕಿ: 30,000=00 ರೂಪಾಯಿ ಹೀಗೆ ಒಟ್ಟು ಅ:ಕಿ: 1,02,000=00 ರೂಪಾಯಿ ಬೆಲೆ ಬಾಳುವ ಸ್ವತ್ತನ್ನು ವಶ ಪಡಿಸಿಕೊಂಡು ಆರೋಪಿತರ ವಿರುದ್ದ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗಿದೆ.
ಅತೀ ಚಾಕ ಚಾಕತ್ಯೆಯಿಂದ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ, ಪತ್ತೆ ಕಾರ್ಯ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ









