ಬೆಂಗಳೂರಿನ ಮಹದೇವಪುರ, ಕೆ.ಜಿ.ಹಳ್ಳಿ ಹಾಗೂ ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಹೊರರಾಜ್ಯದವರು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಶಪಡಿಸಿಕೊಂಡ ವಸ್ತುಗಳು: 37 ಕೆ.ಜಿ 400 ಗ್ರಾಂ ಗಾಂಜಾ, 33 ಗ್ರಾಂ ಹೈಡೋ ಗಾಂಜಾ ಹಾಗೂ 23.19 ಗ್ರಾಂ ಎಂಡಿಎಂಎ (MDMA).
ವಶಪಡಿಸಿಕೊಂಡ ಡ್ರಗ್ಸ್‌ನ ಅಂದಾಜು ಮೌಲ್ಯ ₹ 24.12 ಲಕ್ಷ (ಮಾರುಕಟ್ಟೆ ಮೌಲ್ಯ ಸುಮಾರು ₹ 48.24 ಲಕ್ಷ).
ಹೆಚ್ಚಿನ ಹಣದ ಆಸೆಗಾಗಿ ಹೊರರಾಜ್ಯಗಳಿಂದ ಡ್ರಗ್ಸ್ ತಂದು ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ನಾಲ್ವರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಗಳನ್ನು ಉಪ ಪೊಲೀಸ್ ಆಯುಕ್ತರುಗಳಾದ ವೈಟ್ ಫೀಲ್ಡ್ ವಿಭಾಗದ, ಶ್ರೀ ಸೈದುಲು ಅಡಾವತ್, ಐಪಿಎಸ್, ಪೂರ್ವ ವಿಭಾಗದ ಡಾ.ವಿಕ್ರಮ್.ವಿ.ಅಮಟೆ, ಐ.ಪಿ.ಎಸ್, ಉತ್ತರ ವಿಭಾಗದ ಶ್ರೀ ಬಿ.ಎಸ್.ನೇಮಗೌಡ, ಐ.ಪಿ.ಎಸ್ ರವರುಗಳ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತರು ಗಳಾದ ಶ್ರೀಮತಿ. ರೀನಾ ಸುವರ್ಣ, ಶ್ರೀ.ಲಕ್ಷ್ಮೀಕಾಂತ್.ಆರ್, ಶ್ರೀ.ಬಿ.ಆರ್.ವೇಣುಗೋಪಾಲ್ ರವರುಗಳ ನೇತೃತ್ವದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಯವರುಗಳ ತಂಡ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









