76 ಕೆ.ಜಿ 700 ಗ್ರಾಂ ಗಾಂಜಾ, 1 ಬೊಲೇರೋ ಪಿಕ್ ಅಫ್ ವಾಹನ, 3 ಮೊ.ಫೋನ್ ವಠ, ಮೌಲ್ಯ 30.68 ಲಕ್ಷ
ದಿನಾಂಕ:04/12/2024 ರಂದು ಆಶೋಕ್ ನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ದೊರೆತ್ತಿರುತ್ತದೆ. ಮಾಹಿತಿಯಲ್ಲಿ ಆಶೋಕ್‌ನಗರ ಪೊಲೀಸ್ ಸರಹದ್ದಿಗೆ ಸೇರಿದ ಬನ್ನೇರುಘಟ್ಟದಿಂದ ಹೊಸೂರು ಕಡೆಗೆ ಹೋಗುವ ರಸ್ತೆಯಲ್ಲಿರುವ ಕ್ರಿಶ್ಚಿಯನ್ ಸ್ಮಶಾನದ ಮುಂಭಾಗವಿರುವ ಸಾರ್ವಜನಿಕ ರಸ್ತೆಯಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಬೊಲೇರೋ ಪಿಕ್ ಅಪ್ ವಾಹನಲ್ಲಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿಯಲ್ಲಿ ತಿಳಿಸಿರುತ್ತಾರೆ.
ಈ ಮಾಹಿತಿಯನ್ನು ಆಧಾರಿಸಿ, ಆಶೋಕನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ಬಾತ್ಮೀದಾರರು ತಿಳಿಸಿದ ಸ್ಥಳಕ್ಕೆ ಧಾವಿಸಿ, ಮೂವರು ವ್ಯಕ್ತಿಗಳನ್ನು 76 ಕೆ.ಜಿ 700 ಗ್ರಾಂ ಗಾಂಜಾ, 1-ಬೊಲೇರೋ ಪಿಕ್‌ಅಪ್ ವಾಹನ ಹಾಗೂ 3-ಮೊಬೈಲ್ ಫೋನ್‌ಗಳ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು.

ದಿನಾಂಕ:05/12/2024 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 12 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಆರೋಪಿಗಳ ಸಹಚರನೋರ್ವನು ಕೊಲೆ ಪ್ರಕರಣದಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸಜಾ ಬಂಧಿಯಾಗಿದ್ದು, ಆತನು ನೀಡಿದ ಮಾಹಿತಿ ಮೇರೆಗೆ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಬಳಿ ಇರುವ ತುನಿ ಎಂಬ ಗ್ರಾಮದಲ್ಲಿನ ಓರ್ವ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಗಾಂಜಾವನ್ನು ಖರೀದಿ ಮಾಡಿಕೊಂಡು ಬಂದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದದ್ದಾಗಿ ತಿಳಿಸಿರುತ್ತಾರೆ.
ದಿನಾಂಕ:06/12/2024 ರಂದು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸಜಾ ಬಂಧಿಯಾಗಿದ್ದ ಮತ್ತೋರ್ವ ಸಹಚರನನ್ನು ಬಾಡಿ ವಾರೆಂಟ್ ಮುಖೇನ 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು. ಪೊಲೀಸ್ ಅಭಿರಕ್ಷೆಗೆ ಪಡೆದ ನಾಲ್ವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆ ಆರೋಪಿಗಳಿಂದ ಯಾವುದೇ ಉಪಯುಕ್ತ ಮಾಹಿತಿ ದೊರೆಯದ ನಾಲ್ವರು ಆರೋಪಿಗಳನ್ನು ದಿನಾಂಕ:10/12/2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.

ಒಟ್ಟಾರೆ ಈ ಪ್ರಕರಣದ ಆರೋಪಿಗಳ ವಶದಿಂದ 76 ಕೆ.ಜಿ 700 ಗ್ರಾಂ ಗಾಂಜಾ, I-ಬೊಲೆರೋ ಪಿಕ್ ಅಪ್ ವಾಹನ ಮತ್ತು 3-ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 30,68,000/– (ಮೂವತ್ತು ಲಕ್ಷದ ಆರವತ್ತೆಂಟು ಸಾವಿರ ರೂಪಾಯಿ).
ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಶ್ರೀ ಶೇಖರ್ ಹೆಚ್.ಟಿ, ಐ.ಪಿ.ಎಸ್ ಮತ್ತು ಕಬ್ಬನ್ ಪಾರ್ಕ್ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಬಾಲಕೃಷ್ಣ, ಸಿ. ರವರ ಮಾರ್ಗದರ್ಶನದಲ್ಲಿ ಅಶೋಕನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ರವರಾದ ಶ್ರೀ ರವಿ ಕೆ.ಬಿ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.










