ಶ್ರೀ ನಾಗರಾಜ ಗೌಡರ ತಂದೆ ಶಿವಪ್ಪ ಗೌಡರ, ಪ್ರಾಯ: 69 ವರ್ಷ, ಉದ್ಯೋಗ: ಕೃಷಿ ಕೆಲಸ, ಸಾ ಮಾರುತಿನಗರ, ಕೊಲಶಿರ್ಶಿ, ತಾ: ಸಿದ್ದಾಪುರ, ಇವರು ಠಾಣಿಗೆ ಹಾಜರಾಗಿ, “ಈ ವರ್ಷ ತಮ್ಮ ತೋಟದ ಅಡಿಕೆ ಬೆಳೆಯಲ್ಲಿ ಕೊನೆ ಕೊಯ್ದು ಮಾಡಿ, ಅಡಿಕೆ ಒಣಗಿಸಲು ಹಾಕಿದ್ದು, ಕೊನೆ ಕೊಯ್ಲಿಗಿಂತ ಮೊದಲು ಶೇಖರಿಸಿದ್ದ ಗೋಟು ಅಡಿಕೆಯನ್ನು ಒಣಗಿಸಿ ಒಟ್ಟು ಆರು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬ ಮನೆಯ ಮುಂದಿನ ಅಂಗಳದಲ್ಲಿ ಇಟ್ಟದ್ದನ್ನು ದಿ: 05/02/2025 ರಂದು ರಾತ್ರಿ 10:30 ಗಂಟೆಯಿಂದ ದಿ: 06/02/2025 ರಂದು ಬೆಳಗ್ಗಿನ ಜಾವ 07:00 ಗಂಟೆ ನಡುವಿನ ಆವಧಿಯಲ್ಲಿ ಮನೆಯ ಮುಂದಿನ ಅಂಗಳದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲ ತುಂಬಿಟ್ಟಿದ್ದ ಒಣಗಿದ ಸಿಪ್ಪೆಗೋಟನ ಆರು ಅಡಿಕೆ ಚೀಲಗಳ ಪೈಕಿ ಮೂರು ಒಣ ಸಿಪ್ಪೆಗೋಟನ ಅಡಿಕೆ ಚೀಲಗಳನ್ನು ಯಾರೋ ಕಳ್ಳರು ಕದ್ದುಕೊಂಡು ಹೋಗಿರುತ್ತಾರೆ. ಕಳುವಿಗೆ ಮೂರು ಚೀಲಗಳಲ್ಲಿ ತಲಾ 15 ಕೆ.ಜಿ ಯಂತೆ ಒಟ್ಟು 45 ಕೆ.ಜಿ ಒಣಗಿದ ಸಿಪ್ಪೆಗೋಟಿನ ಅಡಿಕೆ ಇದ್ದು, ಅಂದಾಜು ಕಿಮ್ಮತ್ತು ಒಟ್ಟು 10,000/- ನೇವುಗಳನ್ನು ಕಳ್ಳತನ ಮಾಡಿಕೊಂಡು ಮಾಡಿಕೊಂಡು ಹೋದ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆ ಗುನ್ನಾ ನಂ: 22/2024 ಕಲಂ: 303(2) ಭಾರತೀಯ ನ್ಯಾಯ ಸಂಹಿತೆ-2023 ನೇದರಂತೆ ದೂರು ದಾಖಲಾಗಿರುತ್ತದೆ.
ಸದ್ರಿ ಪ್ರಕರಣದ ಪತ್ತೆಯ ಕುರಿತು ಶ್ರೀ ಎಂ ನಾರಾಯಣ ಐಪಿಎಸ್,ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರಕನ್ನಡ ಜಿಲ್ಲೆ. ಶ್ರೀ ಜಗದೀಶ ನಾಯ್ಕ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ, ಶ್ರೀ ಗಣೇಶ ಕೆ.ಎಲ್, ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿರಸಿ ಉಪವಿಭಾಗ ಶಿರಸಿ ರವರ ಮಾರ್ಗದರ್ಶನದಲ್ಲ. ಶ್ರೀ ಜೆ.ಬಿ. ಸೀತಾರಾಮ ಪೊಲೀಸ್ ನಿರೀಕ್ಷಕರು ಸಿದ್ದಾಪುರ ಪೊಲೀಸ್‌ಠಾಣಿ, ಶ್ರೀ ಅನೀಲ ಬಿ.ಎಂ. ಪಿ.ಎಸ್.ಐಸಿದ್ದಾಪುರ ಪೊಲೀಸ್‌ಠಾಣಿ, ಶ್ರೀಮತಿ ಗೀತಾ ಶಿರ್ಶಿಕರ, ಪಿ.ಎಸ್.ಐ ಸಿದ್ದಾಪುರ ಪೊಲೀಸ್ ಠಾಣಿ ಮತ್ತು ಸಿಬ್ಬಂದಿಗಳಾದ ರಮೇಶ ಕೂಡಲ್, ರಾಜು ಎಂ, ಶ್ರೀಶೈಲ್ ಉಪ್ಪಾರ, ಮಣಿಕಂಠ ಎಂ.ಆರ್ ರವರು ಸೇರಿಕೊಂಡು ಕಳ್ಳತನ ಮಾಡಿದಂತಹ ಕಾಶಿನಾಥ ತಂದೆ ಕೃಷ್ಣ ನಾಯ್ಕ, ಪ್ರಾಯ: 34 ವರ್ಷ, ಉದ್ಯೋಗ: ಕೂಲ ಕೆಲಸ, ಸಾ ಗುಡ್ಡಕೇರಿ, ಕೋಲಶಿರ್ಶಿ, ತಾ: ಸಿದ್ದಾಪುರ, (ಉ.ಕ). ಇತನನ್ನು ಪತ್ತೆ ಮಾಡಿ ದಿ: 07-02-2025 ರಂದು ವಶಕ್ಕೆ ಪಡೆದಿದ್ದು ಅವನಿಂದ ಕಳ್ಳತನ ಮಾಡಿದಂತಹ ಒಟ್ಟೂ ಅಂದಾಜು 25,000/-ರೂ, ಮೌಲ್ಯದ 8 ಅಡಿಕ ಚೀಲವನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ ಸೈಕಲ್ ನಂಬರ ಕೆಎ 31/ಇ.ಸಿ 1770 ಅಂದಾಜು ಮೌಲ್ಯ 35,000/-ನೇದನ್ನು ವಶಪಡಿಸಿಕೊಳ್ಳಲಾಗಿದೆ. ಆಪಾದಿತನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.









