- 2024ರಲ್ಲಿ ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ರೀತ್ಯಾ ಪ್ರಕರಣದ ಆರೋಪಿಯಾಗಿದ್ದ ವಿದೇಶಿ ಪ್ರಜೆಯೊಬ್ಬನನ್ನು ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಂಟಿ ಕಾರ್ಯಾಚರಣೆಯಿಂದ ಸೆರೆಹಿಡಿದಿದ್ದಾರೆ. ವಿದೇಶಿಗನಿಂದ ನಿಷೇಧಿತ ಮಾದಕ ವಸ್ತುಗಳಾದ 55 ಗ್ರಾಂ ಎಂ.ಡಿ.ಎಂ.ಸಿ ಕ್ರಿಸ್ಟಲ್ ಮತ್ತು 3 ಕೆಜಿ ಗಾಂಜಾವನ್ನು ಕಬ್ಜೆಗೆ ಪಡೆದಿದ್ದು, ಇದರ ಒಟ್ಟು ಮೌಲ್ಯ 8 ಲಕ್ಷವೆಂದು ಅಂದಾಜಿಸಲಾಗಿದೆ.
- ಅಕ್ರಮ ವಿದೇಶಿಗಳಾಗಿದ್ದ ಇಬ್ಬರು ಪುರುಷ ಮತ್ತು ಓರ್ವ ಮಹಿಳೆಯನ್ನು ಮಾನ್ಯ ಎಫ್.ಆರ್.ಆರ್.ಓ ರವರ ಮುಂದೆ ಹಾಜರುಪಡಿಸಿ, ವಿದೇಶಿಯರ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ಚಿಕ್ಕಜಾಲ ಪೊಲೀಸರು ಈ ರಹಸ್ಯವನ್ನು ಭೇಧಿಸಿದ್ದಾರೆ.
- ಇದೇ ರೀತಿ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ವಿದೇಶಿ ಒಬ್ಬನನ್ನು ಮತ್ತು ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವಿದೇಶಿಗರನ್ನು ಬಂಧಿಸಿದ್ದು, ಈ ಪೈಕಿ ತಲಾ ಒಬ್ಬ ಮಹಿಳೆ ಮತ್ತು ಪುರುಷರಿದ್ದರು. ಈ ಎಲ್ಲಾ ವಿದೇಶಿ ಪ್ರಜೆಗಳನ್ನು ವಿದೇಶಿಯರ ಬಂಧನ ಕೇಂದ್ರಕ್ಕೆ ರವಾನಿಸಲಾಗಿದೆ.
- ಗೋವಿಂದಪುರ ಠಾಣೆ ಮತ್ತು ಪುಟ್ಟೇನಹಳ್ಳಿ ಠಾಣಾ ಸರಹದ್ದಿನಲ್ಲಿ ತಲಾ ಒಬ್ಬ ವಿದೇಶಿ ಪ್ರಜೆಗಳನ್ನು ವಾರೆಂಟ್ ಮೇಲೆ ಬಂಧಿಸಲಾಗಿದೆ. ಈ ಇಬ್ಬರೂ ಎನ್.ಡಿ.ಪಿ.ಎಸ್ ಪ್ರಕರಣದಲ್ಲಿ ಜಾಮೀನು ಪಡೆದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.
- ಒಬ್ಬ ವಿದೇಶಿ ಪ್ರಜೆಯನ್ನು ಎಫ್.ಆರ್.ಆರ್.ಓ ರವರ ಆದೇಶದ ಮೇರೆಗೆ ವಿದೇಶಿಯರ ಬಂಧನ ಕೇಂದ್ರದಿಂದ ಆತನ ದೇಶಕ್ಕೆ ಮರಳಿ ಕಳುಹಿಸಲಾಗಿದೆ.
ಏನಿದು NDPS ಕಾಯ್ದೆ..??
NDPS ಎಂದರೆ 'ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ ಆಕ್ಟ್'. ಈ ಕಾಯ್ದೆಯು ಭಾರತದಲ್ಲಿ ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಉತ್ಪಾದನೆ, ಮಾರಾಟ, ಖರೀದಿ, ಸಾಗಣೆ ಮತ್ತು ಬಳಕೆಯನ್ನು ನಿಯಂತ್ರಿಸುತ್ತದೆ. ಈ ಕಾಯ್ದೆಯಡಿ ಯಾವುದೇ ವ್ಯಕ್ತಿಯು ಅಪರಾಧದಲ್ಲಿ ತೊಡಗಿದ್ದರೆ, ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
NDPS ಕಾಯ್ದೆಯಡಿ ಬರುವ ಯಾವುದೇ ರೀತಿಯ ಅಪರಾಧಗಳನ್ನು NDPS ಪ್ರಕರಣಗಳು ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಮಾದಕ ದ್ರವ್ಯಗಳನ್ನು ಮಾರಾಟ ಮಾಡುವುದು, ಸಾಗಿಸುವುದು, ಬೆಳೆಸುವುದು ಅಥವಾ ಬಳಸುವುದು ಇತ್ಯಾದಿ.ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









