Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Bengaluru City Police

ಕಾನೂನು ಬಾಹಿರವಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಹೊರರಾಜ್ಯದ ಇಬ್ಬರು ವ್ಯಕ್ತಿಗಳ ಬಂಧನ

CREDOPRESS MEDIA PVT LTD by CREDOPRESS MEDIA PVT LTD
December 14, 2024
in Bengaluru City Police,Crime News,J. JOHN PREM EDITOR,Karnataka News,Latest News,Namma Police,Namma Police News
0
ಕಾನೂನು ಬಾಹಿರವಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಹೊರರಾಜ್ಯದ ಇಬ್ಬರು ವ್ಯಕ್ತಿಗಳ ಬಂಧನ
0
SHARES
38
VIEWS
Share on FacebookShare on Twitter

2 ದೇಶಿಯ ನಿರ್ಮಿತ ಪಿಸ್ತೂಲ್‌ಗಳು, 4 ಜೀವಂತ ಮದ್ದು ಗುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ 1-ದ್ವಿಚಕ ವಾಹನ ವಶ. ಮೌಲ್ಯ 5 ಲಕ್ಷ.
ಹುಳಿಮಾವು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ದಿನಾಂಕ:20/11/2024 ರಂದು ಠಾಣಾ ಸರಹದ್ದಿನ ಎಲೇನಹಳ್ಳಿ, ಕೊಪ್ಪ-ಬೇಗೂರು ರಸ್ತೆಯ ನೈಸ್ ರೋಡ್ ಬ್ರಿಡ್ಜ್ ಹತ್ತಿರ ವಾಹನ ತಪಾಸಣೆ ಮಾಡುತ್ತಿರುವಾಗ ರಾತ್ರಿ 08.30 ಗಂಟೆ ಸಮಯದಲ್ಲಿ ದ್ವಿ-ಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳನ್ನು ತಡೆದು ದ್ವಿ-ಚಕ್ರ ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಕೇಳಲಾಗಿ, ದ್ವಿ-ಚಕ್ರ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸಿರುವುದಿಲ್ಲ. ದ್ವಿ-ಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಓರ್ವ ವ್ಯಕ್ತಿಯ ಬಳಿ ಇದ್ದ ಬ್ಯಾಗಿನ ಬಗ್ಗೆ ಪ್ರಶ್ನಿಸಲಾಗಿ, ಆ ಇಬ್ಬರು ವ್ಯಕ್ತಿಗಳು ಓಡಿಹೋಗಲು ಪ್ರಯತ್ನಿಸಿದರು. ಅವರಿಬ್ಬರನ್ನು ಪೊಲೀಸರು ಹಿಡಿದು ಬ್ಯಾಗನ್ನು ಪರಿಶೀಲಿಸಿದಾಗ, ಬ್ಯಾಗ್‌ನಲ್ಲಿ 2 ದೇಶಿಯ ನಿರ್ಮಿತ ಪಿಸ್ತೂಲ್, 4 ಜೀವಂತ ಮದ್ದು ಗುಂಡುಗಳು ಇರುವುದು ಕಂಡು ಬಂದಿದ್ದು, ತಕ್ಷಣ ಅವರಿಬ್ಬರನ್ನು ವಶಕ್ಕೆ ಪಡೆದುಕೊಂಡು, ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು, ಅವರುಗಳ ಸಮಾಕ್ಷಮ ಇಬ್ಬರು ವ್ಯಕ್ತಿಗಳು ಹೊಂದಿದ್ದ 2 ದೇಶಿಯ ನಿರ್ಮಿತ ಪಿಸ್ತೂಲ್, 4 ಜೀವಂತ ಮದ್ದು ಗುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ | ದ್ವಿ-ಚಕ್ರ ವಾಹನವನ್ನು ಪಂಚನಾಮೆಯ ಮುಖಾಂತರ ವಶಪಡಿಸಿಕೊಳ್ಳಲಾಯಿತು. ವಶಪಡಿಸಿಕೊಂಡ ವಸ್ತುಗಳ ಮೌಲ್ಯ 5,00,000/-(ಐದು ಲಕ್ಷ ರೂಪಾಯಿ). ಇಬ್ಬರು ವ್ಯಕ್ತಿಗಳನ್ನು ಹಾಗೂ ಪಂಚನಾಮೆಯಲ್ಲಿ ಅಮಾನತ್ತು ಪಡಿಸಿದ ವಸ್ತುಗಳ ಸಮೇತ ಠಾಣೆಗೆ ಕರೆತಂದು ಠಾಣೆಯಲ್ಲಿ ಆರ್ಮ್ಸ್ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.


ದಿನಾಂಕ:21/11/2024 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 5 ದಿನಗಳ ಕಾಲ ಪೊಲೀಸ್‌’ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಆರೋಪಿಗಳು ಬಿಹಾರ್ ರಾಜ್ಯ ದಿಂದ ದೇಶಿಯ ನಿರ್ಮಿತ ಪಿಸ್ತೂಲ್ ಹಾಗೂ ಜೀವಂತ ಮದ್ದು ಗುಂಡುಗಳನ್ನು ತಂದಿರುವುದಾಗಿ ಹಾಗೂ ಅಕ್ರಮವಾಗಿ ಸಾಗಾಣಿಕೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.

ಈ ಇಬ್ಬರು ಆರೋಪಿಗಳಿಂದ ಯಾವುದೇ ಉಪಯುಕ್ತ ಮಾಹಿತಿ ದೊರೆಯದ ದಿನಾಂಕ:25/11/2024 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.


ಈ ಯಶಸ್ವಿ ಕಾರ್ಯಾಚರಣೆಯನ್ನು ಬೆಂಗಳೂರು ನಗರ, ಆತ್ಮೀಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ ಸಾರಾ ಫಾತಿಮಾ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎ.ಸಿ.ಪಿ ರವರಾದ ಶ್ರೀ ಕೆ.ಎಂ ಸತೀಶರವರ ಉಸ್ತುವಾರಿಯಲ್ಲಿ ಹುಳಿಮಾವು ಪೊಲಿಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಬಿ.ಜಿ.ಕುಮಾರಸ್ವಾಮಿ ರವರ ಅಧಿಕಾರಿ/ಸಿಬ್ಬಂದಿಯವರ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

    Tags: Bengaluru City PoliceHulimavu PoliceKarnataka NewsKarnataka State PoliceNamma PoliceNamma Police NewsPolice NewsPrime News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಅವಲಹಳ್ಳಿ ಪೊಲೀಸರ ಭರ್ಜರಿ ಬೇಟೆ: ₹1.28 ಕೋಟಿ ಮೌಲ್ಯದ ಚಿನ್ನ-ನಗದು ವಶ, 4 ಕಳ್ಳರ ಬಂಧನ
    CREDOPRESS

    ಅವಲಹಳ್ಳಿ ಪೊಲೀಸರ ಭರ್ಜರಿ ಬೇಟೆ: ₹1.28 ಕೋಟಿ ಮೌಲ್ಯದ ಚಿನ್ನ-ನಗದು ವಶ, 4 ಕಳ್ಳರ ಬಂಧನ

    August 5, 2026
    ಶಾಲೆಗಳ ಅಡುಗೆಮನೆಯಿಂದ ಗ್ಯಾಸ್ ಸಿಲಿಂಡರ್ ಕಳವು: ಭಾಲ್ಕಿ ಪೊಲೀಸರ ಭರ್ಜರಿ ಕಾರ್ಯಾಚರಣೆ – ₹9.75 ಲಕ್ಷ ಮೌಲ್ಯದ 55 ಸಿಲಿಂಡರ್, ಕಾರು ಜಪ್ತಿ; ಆರೋಪಿಗಳ ಬಂಧನ
    Bidar District Police

    ಶಾಲೆಗಳ ಅಡುಗೆಮನೆಯಿಂದ ಗ್ಯಾಸ್ ಸಿಲಿಂಡರ್ ಕಳವು: ಭಾಲ್ಕಿ ಪೊಲೀಸರ ಭರ್ಜರಿ ಕಾರ್ಯಾಚರಣೆ – ₹9.75 ಲಕ್ಷ ಮೌಲ್ಯದ 55 ಸಿಲಿಂಡರ್, ಕಾರು ಜಪ್ತಿ; ಆರೋಪಿಗಳ ಬಂಧನ

    August 4, 2026
    ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು
    Bengaluru City Police

    ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು

    July 28, 2026
    Next Post
    229 ಗ್ರಾಂ ಚಿನ್ನಾಭರಣ, 21.41 ಗ್ರಾಂ ವಜ್ರದ ಆಭರಣ ಹಾಗೂ 37.28 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶ. ಮೌಲ್ಯ 25 ಲಕ್ಷ.

    229 ಗ್ರಾಂ ಚಿನ್ನಾಭರಣ, 21.41 ಗ್ರಾಂ ವಜ್ರದ ಆಭರಣ ಹಾಗೂ 37.28 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶ. ಮೌಲ್ಯ 25 ಲಕ್ಷ.

    ಸರಗಳ್ಳತನ ಮತ್ತು ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ. 113 ಗ್ರಾಂ ಚಿನ್ನಾಭರಣ ವಶ. ಮೌಲ್ಯ 8.55 ಲಕ್ಷ

    ಸರಗಳ್ಳತನ ಮತ್ತು ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ. 113 ಗ್ರಾಂ ಚಿನ್ನಾಭರಣ ವಶ. ಮೌಲ್ಯ 8.55 ಲಕ್ಷ

    ಇದೆಂತಹ ಕರಾಳ ಅಮವಾಸ್ಯೆ ದಿನ , ಸಾವಿನ ಮೇಲೆ ಸಾವಿನ ಸರಣಿ ಸುದ್ದಿಗಳು 😢 , ಕರ್ತವ್ಯದ ಮೊದಲ ದಿನವೇ ಮಸಣ ಸೇರಿದ ಹಾಸನಕ್ಕೆ ಬರಬೇಕಿದ್ದ  ಐಪಿಎಸ್

    ಇದೆಂತಹ ಕರಾಳ ಅಮವಾಸ್ಯೆ ದಿನ , ಸಾವಿನ ಮೇಲೆ ಸಾವಿನ ಸರಣಿ ಸುದ್ದಿಗಳು 😢 , ಕರ್ತವ್ಯದ ಮೊದಲ ದಿನವೇ ಮಸಣ ಸೇರಿದ ಹಾಸನಕ್ಕೆ ಬರಬೇಕಿದ್ದ  ಐಪಿಎಸ್

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    BBMP B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police Chikkabalapura Police CM Siddaramaiah Credo Press CREDOPRESS MEDIA Cyber Crime Davangere police drugs news Electronic city Police Govindaraj Nagar Police Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ಅವಲಹಳ್ಳಿ ಪೊಲೀಸರ ಭರ್ಜರಿ ಬೇಟೆ: ₹1.28 ಕೋಟಿ ಮೌಲ್ಯದ ಚಿನ್ನ-ನಗದು ವಶ, 4 ಕಳ್ಳರ ಬಂಧನ
    • ಶಾಲೆಗಳ ಅಡುಗೆಮನೆಯಿಂದ ಗ್ಯಾಸ್ ಸಿಲಿಂಡರ್ ಕಳವು: ಭಾಲ್ಕಿ ಪೊಲೀಸರ ಭರ್ಜರಿ ಕಾರ್ಯಾಚರಣೆ – ₹9.75 ಲಕ್ಷ ಮೌಲ್ಯದ 55 ಸಿಲಿಂಡರ್, ಕಾರು ಜಪ್ತಿ; ಆರೋಪಿಗಳ ಬಂಧನ
    • ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved