ದಿನಾಂಕ: 20-11-2024 ರಿಂದ 21-11-2024 ರ ವರೆಗೆ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಬೆಂಗಳೂರುನಲ್ಲಿ ಆಯೋಜಿಸಿದ್ದ, 2024 ನೇ ಸಾಲಿನ 6 ನೇ ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಕೊಡಗು ಜಿಲ್ಲಾ ಪೊಲೀಸ್ನ ತಂಡ ಭಾಗವಹಿಸಿದ್ದು, ಈ ಕೆಳಗಿನ ಅಧಿಕಾರಿ ಮತ್ತು ಸಿಬ್ಬಂದಿಗಳು ವಿವಿಧ ಸ್ಪರ್ಧೆಗಳಲ್ಲಿ ಪದಕಗಳನ್ನು ಪಡೆದಿರುತ್ತಾರೆ.
1. ಶ್ರೀ ಕೆ.ಆರ್.ಜಿತೇಂದ್ರ ರೈ, ಎಆರ್ಎಸ್ಐ, ಡಿ.ಎ.ಆರ್, ಕೊಡಗು ಜಿಲ್ಲೆ ರವರು ಸ್ಫೋಟಕ ಪತ್ತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಪಡೆದಿರುತ್ತಾರೆ.
2. ಶ್ರೀ ಮನಮೋಹನ.ಬಿ.ಪಿ, ಎಹೆಚ್, ಡಿ.ಎ.ಆರ್, ಕೊಡಗು ಜಿಲ್ಲೆ ರವರು ಕಾಪರ್ ಶ್ವಾನವನ್ನು ಉತ್ತಮವಾಗಿ ತರಬೇತಿಗೊಳಿಸಿ ಮಾದಕ ವಸ್ತು ಪತ್ತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಪಡೆದಿರುತ್ತಾರೆ.
3. ಶ್ರೀ ಸ್ವಾಮಿ.ಕೆ.ಕೆ, ಸಿಪಿಸಿ, ಭಾಗಮಂಡಲ ಪೊಲೀಸ್ ಠಾಣೆ, ಕೊಡಗು ಜಿಲ್ಲೆ ರವರು ಪೊಲೀಸ್ ಫೋಟೋಗ್ರಾಫಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿ ಬೆಳ್ಳಿ ಪದಕ ಪಡೆದಿರುತ್ತಾರೆ.
4. ಕು| ಆಯಿಷಾ, ಮಪಿಸಿ, ಭಾಗಮಂಡಲ ಪೊಲೀಸ್ ಠಾಣೆ, ಕೊಡಗು ಜಿಲ್ಲೆ ರವರು ಕಂಪ್ಯೂಟರ್ ಆಫೀಸ್ ಆಟೋಮೇಶನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿ ಬೆಳ್ಳಿ ಪದಕ ಪಡೆದಿರುತ್ತಾರೆ.
5. ಶ್ರೀ ಸಿದ್ದನಗೌಡ ಪಾಟೀಲ, ಎಪಿಸಿ, ಡಿ.ಎ.ಆರ್, ಕೊಡಗು ಜಿಲ್ಲೆ ರವರು ಬ್ರೂನೋ ಶ್ವಾನವನ್ನು ಉತ್ತಮವಾಗಿ ತರಬೇತಿಗೊಳಿಸಿ ಅಪರಾಧ ಪತ್ತೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳಿಸಿ ಕಂಚಿನ ಪದಕ ಪಡೆದಿರುತ್ತಾರೆ.
ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿ ರಾಷ್ಟ್ರ ಮಟ್ಟದ ಪೊಲೀಸ್ ಕರ್ತವ್ಯ ಕೂಟದ ಸ್ಪರ್ಧೆಗೆ ಕರ್ನಾಟಕ ರಾಜ್ಯ ಪೊಲೀಸ್ನ ಪ್ರತಿನಿಧಿಯಾಗಿ ಕೊಡಗು ಜಿಲ್ಲಾ ಪೊಲೀಸ್ ತಂಡ ಆಯ್ಕೆಯಾಗಿರುವುದು ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಕೊಡಗು ಜಿಲ್ಲಾ ಪೊಲೀಸ್ಗೆ ಹೆಮ್ಮೆಯಾಗಿರುತ್ತದೆ.
6 ನೇ ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಭಾಗವಹಿಸಿದ ಹಾಗೂ ಪದಕಗಳನ್ನು ಪಡೆದ ಎಲ್ಲಾ ಅಧಿಕಾರಿ/ಸಿಬ್ಬಂದಿ ರವರುಗಳಿಗೆ ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಅಭಿನಂದಿಸಿರುತ್ತಾರೆ.
ಪೊಲೀಸ್ ಅಧೀಕ್ಷಕರು. ಕೊಡಗು ಜಿಲ್ಲೆ, ಮಡಿಕೇರಿ









