ಕೆಲವು ದಿನಗಳ ಹಿಂದೆ ಶಹಾಪೂರ ನಗರದ ಹಿರೇಮಠ ಪೆಟ್ರೋಲ್ ಪಂಪ್ ಎದರುಗದೆ ಇರುವ ಎಸ್.ಬಿ.ಐ ಬ್ಯಾಂಕ್ ನ ಹಿಂದುಗಡೆ ಶ್ರೀ ಫಾನಾರಾಮ್ ಪಟೇಲ್ ಇವರು ವಾಸವಾಗಿದ್ದ ಮನೆಯಲ್ಲಿ ದಿನಾಂಕಃ 18/04/2025 ರಂದು ಆಲ್ಮಾರಿ ಮುರಿದು ಹಣ ಕಳ್ಳತನ ಮಾಡಿಕೊಂಡು ಹೋದ ಘಟನೆ ನಡೆಯಿತು
ಸದರಿ ದೂರಿನ ಮೇರೆಗೆ ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 104/2025 ಕಲಂ 306 ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು
ಮಾನ್ಯ ಪೃಥ್ವಿಕ್ ಶಂಕರ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಯಾದಗಿರಿ ಹಾಗು ಮಾನ್ಯ ಜಾವೀದ್ ಇನಾಂದಾರ್ ಕೆ.ಎಸ್.ಪಿ.ಎಸ್ ಪೊಲೀಸ್ ಉಪ-ಅಧೀಕ್ಷಕರು ಸುರಪೂರ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಶ್ರೀ ಎಸ್.ಎಂ.ಪಾಟೀಲ್, ಪಿ.ಐ ಶಹಾಪೂರ ಪೊಲೀಸ್ ಠಾಣೆ ಹಾಗು ಅವರ ಸಿಬ್ಬಂದಿಯವರಾದ ಶ್ರೀ ಡಿ ವಿ ನಾಯಕ್ ಪಿ ಎಸ್.ಐ, ಗಣಪತಿ ಹೆಚ್.ಸಿ 26, ಸಿದ್ರಾಮರಡ್ಡಿ ಪಿ.ಸಿ 387, ರವಿಕುಮಾರ ಪಿ.ಸಿ 343, ಎಮ್.ಡಿ ಜುಬೇರ್ ಪಿ.ಸಿ 301, ಸಿದ್ರಾಮಯ್ಯ ಪಿ.ಸಿ 248 ರವರ ನೇತೃತ್ವದಲ್ಲಿ ತಂಡೆ ರಚಿಸಲಾಗಿತ್ತು
ಕಾರ್ಯಚರಣೆಯ ಬಳಿಕಹಲವು ಆಯಾಮಗಳ ಮೂಲಕ ಪತ್ತೆ ಕಾರ್ಯ ಕೈಗೊಂಡು ಪ್ರಕರಣದಲ್ಲಿ ಭಾಗಿಯಾದ ರಾಜಸ್ಥಾನ್ ಮೂಲದ ಆರೋಪಿತರಾದ ಎ-1) ಚೇತಾ ರಾಮ್ ತಂದೆ ಓಕಾರಾಮ್ ಸುತಾರ್, ವಯಸ್ಸು 22 ವರ್ಷ, (ರಾಜಸ್ಥಾನ). ಎ-2) ಹರಿ ರಾಮ್ ತಂದೆ ಜೇತಾರಾಮ್ ವಯಸ್ಸು 25 ವರ್ಷ ಎ-3) ರಾಕೇಶ ತಂದೆ ಜವರಿಲಾಲ್ ಸೇರಿ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಶಹಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು
ಯಾದಗಿರಿ ಎಸ್ ಪಿಪೃಥ್ವಿಕ್ ಶಂಕರ ತಿಳಿಸಿದ್ದಾರೆ
ಆರೋಪಿಗಳಿಗೆ ದಿನಾಂಕ 26/04/2025 ರಂದು ಪತ್ತೆ ಮಾಡಿ ಸದರಿಯವರಿಂದ 9,01,500-00 ರೂಪಾಯಿ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕ್ರೇಟಾ ಕಾರ್ ನಂ. ಆರ್ಜೆ-22-ಸಿಬಿ-2153 ನೇದ್ದು ಜಪ್ತಿ ಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಶಹಾಪುರ ಪೊಲೀಸ್ ಠಾಣೆಯ ಪಿಐ ಎಸ್.ಎಂ.ಪಾಟೀಲ್ ಹೇಳಿದಾರೆ
ಪ್ರಕರಣದಲ್ಲಿ ಪತ್ತೆಕಾರ್ಯ ಮಾಡಿದ ಅಧಿಕಾರಿಗಳಿಗೆ ಮುತ್ತು ಪೊಲೀಸ್ ತಂಡಕ್ಕೆ ಯಾದಗಿರಿ ಪೊಲೀಸ್ ಅಧೀಕ್ಷಕರು ಪ್ರಶಂಸೆ ಜೊತೆಗೆ ಸೂಕ್ತ ಬಹುಮಾನ ಘೋಷಿಸಿರುತ್ತಾರೆ.
ವರದಿ :- ಸಿದ್ದು ಪಟ್ಟೇದಾರ









