ದಿನಾಂಕ:15.06.2024 ರಂದು ಬೆಂಗಳೂರು ನಗರ ಪೊಲೀಸ್ ಹಾಗೂ ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ಸಹಯೋಗದೊಂದಿಗೆ, ವಿಶ್ವ ಹಿರಿಯರ ನಿಂದನ ಜಾಗೃತಿ ದಿನವನ್ನು ಪೊಲೀಸ್ ಆಯುಕ್ತ ರವರ ಕಛೇರಿಯಲ್ಲಿ ಆಚರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿರಿಯರಿಗೆ ಅನುಕೂಲವಾಗುವಂತಹ ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಸುರಕ್ಷತೆಯ ತರಬೇತಿ ಕಾರ್ಯಕ್ರಮವನ್ನು ಮಾನ್ಯ ಪೊಲೀಸ್ ಆಯುಕ್ತರವರುಚಾಲನೆಯನ್ನು ನೀಡಿರುತ್ತಾರೆ. ಅದರಂತೆ ಪ್ರತಿ ತಿಂಗಳು, ಬೆಂಗಳೂರಿನ ಎಲ್ಲಾ ವಲಯಗಳಲ್ಲೂ ಈ ಕಾರ್ಯಕ್ರಮವನ್ನು ಆಯೋಜಿಸಿ ಹಿರಿಯ ನಾಗರಿಕರಿಗೆ ಅರಿವನ್ನು ಮೂಡಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿತ್ತು.

ಅದೇ ರೀತಿ ನವೆಂಬರ್ ಮಾಹೆಯ 9 ನೇ ತಾರೀಖು ಸಿ.ಎಸ್.ಐ ಚರ್ಚ್, ಬೈರತಿ ಕ್ರಾಸ್, ಹೆಣ್ಣೂರು ರಸ್ತೆ, ಕೊತ್ತನೂರು, ಬೆಂಗಳೂರು-77 ಇಲ್ಲಿ ಹಿರಿಯ ನಾಗರಿಕರಿಗೆ ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಸುರಕ್ಷತೆ ತರಬೇತಿ ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 51 ಜನ ಹಿರಿಯ ನಾಗರಿಕರು ಭಾಗವಹಿಸಿ, ಉಪಯುಕ್ತವಾದ ಮಾಹಿತಿಯನ್ನು ಪಡೆದುಕೊಂಡು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:080-23352833. 3.7899241090.










