- 4,100/- ನಗದು ಮತ್ತು ಒಂದು ಮೊಬೈಲ್ ಫೋನ್ ವಶ.
ಹನುಮಂತನಗರ ಪೊಲೀಸ್ ಠಾಣಾ ಸರಹದ್ದಿನ 80 ಅಡಿ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದರ ಮುಂಭಾಗದಲ್ಲಿ ಇಬ್ಬರು ವ್ಯಕ್ತಿಗಳು ದಿನಾಂಕ:23/04/2025 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಮುಂಬಯಿ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ, ಇಂಡಿಯನ್ ಪ್ರಿಮೀಯಂ ಲೀಗ್‌ನ ಟಿ-20 ಕ್ರಿಕೇಟ್ ಪಂದ್ಯಾವಳಿಗೆ “Dafabet”ಎಂಬ ವೆಬ್-ಸೈಟ್‌ನಲ್ಲಿ ಆನ್-ಲೈನ್ ಮೂಲಕ ಕ್ರಿಕೇಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿಸಿಕೊಂಡಿರುತ್ತಾರೆಂದು ಭಾತ್ಮೀದಾರರಿಂದ ಖಚಿತ ಮಾಹತಿಯೊಂದು ದೊರೆತ್ತಿರುತ್ತದೆ.
ಈ ಮಾಹಿತಿಯ ಆಧಾರದ ಮೇರೆಗೆ ಹನುಮಂತನಗರ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಯವರು ಪಂಚರುಗಳ ಸಮಕ್ಷಮ ದಾಳಿ ಮಾಡಿ, ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದುಕೊಂಡು, ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಓಪ್ಪೋ ಮೊಬೈಲ್ ಫೋನ್ ಮತ್ತು ₹ 4,100/- ಹಣವನ್ನು ವಶಪಡಿಸಿಕೊಳ್ಳಲಾಯಿತು. ಈ ಕುರಿತು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ವಿಚಾರಣೆ ಕೈಗೊಂಡು ಆರೋಪಿಗಳಿಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಪ್ರಗತಿಯಲ್ಲಿದೆ. ತನಿಖೆಯು
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಲೋಕೇಶ್ ಭ.ಜಗಲಾಸರ್ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ವಿ.ವಿ.ಪುರಂ ಉಪ-ವಿಭಾಗದಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಶಾಮೀದ್ ಬಾಷಾ ರವರ ನೇತೃತ್ವದಲ್ಲಿ, ಹನುಮಂತನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಸೂರ್ಯಪ್ರಸಾದ್ ಎಸ್ಮತ್ತು ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣದ ದಾಳಿಯನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.









