41-ಮೊಬೈಲ್ ಫೋನ್, 5-ಲ್ಯಾಪ್ ಟಾಪ್ ಮತ್ತು 03-ವೈಶ್ಯ-ರೌಟರ್ಸಗಳ ವತ. ಮೌಲ್ಯ 20 ಲಕ್ಷ.
ದಿನಾಂಕ:02/11/2024 ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ದೊರೆತ್ತಿರುತ್ತದೆ. ಮಾಹಿತಿಯಲ್ಲಿ ಠಾಣಾ ಸರಹದ್ದಿಗೆ ಸೇರಿದ ಎಲೆಕ್ಟ್ರಾನಿಕ್ ಸಿಟಿ ಪೇಸ್-2ನಲ್ಲಿರುವ ಅಪಾರ್ಟ್‌ಮೆಂಟ್ ವೊಂದರಲ್ಲಿ ಆನ್‌ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟ್, ಕಬಡ್ಡಿ, ಕ್ಯಾಸಿನೋ ಮುಂತಾದ ಆನ್‌ಲೈನ್ ಜೂಜಾಟಗಳನ್ನು ಆಡಿಸುತ್ತಿದ್ದಾರೆಂದು ಮಾಹಿತಿಯಲ್ಲಿ ತಿಳಿಸಿರುತ್ತಾರೆ.
ಈ ಮಾಹಿತಿಯನ್ನು ಆಧಾರಿಸಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ, ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು, ಬಾತ್ಮೀದಾರರು ತಿಳಿಸಿದ ಸ್ಥಳದ ಮೇಲೆ ದಾಳಿ ಮಾಡಿ, Telugu365ಮತ್ತು VLBook web site ಮತ್ತು ಇತರೇ ಆಫ್‌ಗಳ ಮೂಲಕ ಆನಲೈನ್ ಜೂಜಾಟ ಆಡಿಸುತ್ತಾ ಅಕ್ರಮವಾಗಿ ಹಣ ಸಂಪಾದಣೆ ಮಾಡುತ್ತಿದ್ದ ಆರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಅವರುಗಳ ವಶದಿಂದ 41 Anroid Key Pad ಮೊಬೈಲ್ ಪೋನ್‌ಗಳು, 5 ಲ್ಯಾಪ್ ಟ್ಯಾಪ್‌ಗಳು ಹಾಗೂ 03 ವೈಫೈ ರೌಟರ್ಸಗಳನ್ನು ವಶಕ್ಕೆ ಪಡೆದು ಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 20,00,000/- (ಇಪ್ಪತ್ತು ಲಕ್ಷ ರೂಪಾಯಿ)
ವಶಕ್ಕೆ ಪಡೆದ ಆರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಈ ಪ್ರಕರಣದಲ್ಲಿ ಮತ್ತಿಬ್ಬರು ಸಹಚರರ ಬಗ್ಗೆ ಮಾಹಿತಿಯನ್ನು ನೀಡಿದ್ದು, ಅವರುಗಳು ತಲೆಮರೆಸಿಕೊಂಡಿದ್ದು, ಪತ್ತೆಕಾರ್ಯ ಮುಂದುವರೆದಿದೆ. ವಶಕ್ಕೆ ಪಡೆದ ಆರು ಆರೋಪಿಗಳಿಗೆ ಠಾಣೆಯಲ್ಲಿಯೇ ಬೇಲ್ ಮೇಲೆ ಬಿಡುಗಡೆ ಮಾಡಲಾಗಿರುತ್ತದೆ.

ಆತ್ಮೀಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ.ಸಾರಾ ಫಾತಿಮಾ, ಐಪಿಎಸ್ ರವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಸಿಟಿ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಕೆ.ಎಂ ಸತೀಶ್ ರವರ ನೇತೃತ್ವದಲ್ಲಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಸತೀಶ್.ಬಿ.ಎಸ್ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









