ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ರವರ ನಿರ್ದೇಶನದಂತೆ ಧನ್ನೂರ ಪೊಲೀಸ್ ಠಾಣೆಯ ಸುಲಿಗೆ ಪ್ರಕರಣದಲ್ಲಿ ಆರೋಪಿತರ ಪತ್ತೆ ಕುರಿತು ಶ್ರೀ ಶಿವಾನಂದ ಪಾವಡಶೆಟ್ಟಿ, ಪೊಲೀಸ್ ಉಪಾಧೀಕ್ಷಕರು ಭಾಲ್ಕಿ ರವರು ತಮ್ಮ ಉಪ-ವಿಭಾಗದ ಪೊಲೀಸ್ ಅಧಿಕಾರಿಗಳಾದ ಶ್ರೀ ಗುರುಪಾದ ಎಸ್. ಬಿರಾದರ, ಸಿ.ಪಿ.ಐ ಭಾಲ್ಕಿ ಗ್ರಾಮೀಣ ವೃತ್ತ ರವರ ನೇತೃತ್ವದಲ್ಲಿ ಶ್ರೀ ವಿಶ್ವರಾಧ್ಯ, ಪಿ.ಎಸ್.ಐಧನ್ನೂರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರಾದ ಶ್ರೀ ಗುರುನಾಥ, ಶ್ರೀ ಶಾಮರಾವ, ಶ್ರೀ ಪ್ರಶಾಂತರೆಡ್ಡಿ, ಶ್ರೀ ಹರ್ಷವರ್ಧನ ಮತ್ತು ಶ್ರೀ ಶಿವಶಂಕರರವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಿದ್ದು, ತಂಡವು ಕಾರ್ಯ ಪ್ರವರ್ತಗೊಂಡಿದ್ದು, ವೈಜ್ಞಾನಿಕ ನೆರವು, ಸಿ.ಸಿಟಿ.ವಿ ಮತ್ತು ಪೊಲೀಸ್ ಬಾತ್ಮಿದಾರಿಂದ ಮಾಹಿತಿ ಸಂಗ್ರಹಿಸಿ ಐದು ಜನ ಆರೋಪಿತರನ್ನು ಬಂಧಿಸಿ ಅವರಿಂದ 4,02,580=00 ರೂನಗದು ಮತ್ತು ಒಂದು ಕಾರ ಹೀಗೆ ಒಟ್ಟು ಅ:ಕಿ: 10,00,000=00 ರೂ ನೇದನ್ನು ವಶ ಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುತ್ತಾರೆ.

ಭಾಲ್ಕಿ ಉಪ-ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯವರು ಸುಲಿಗೆ ಪ್ರಕರಣದಲ್ಲಿ ಐದು ಜನ ಆರೋಪಿತರಿಗೆ ಬಂಧಿಸಿ 10 ಲಕ್ಷಕ್ಕೂ ಅಧಿಕ ಮೌಲ್ಯದ ನಗದು ಹಣ ಮತ್ತು ಒಂದು ಕಾರ ವಶ ಪಡಿಸಿಕೊಂಡ ಅಪರಾಧ ತಂಡದ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.









